ADVERTISEMENT

ಗಿಲಾನಿ ಆರೋಗ್ಯ ಸ್ಥಿತಿ ಬಗ್ಗೆ ವದಂತಿ; ಕಾಶ್ಮೀರದಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತ

ಪಿಟಿಐ
Published 13 ಫೆಬ್ರುವರಿ 2020, 5:24 IST
Last Updated 13 ಫೆಬ್ರುವರಿ 2020, 5:24 IST
ಸೈಯದ್‌ ಅಲಿ ಶಾ ಗಿಲಾನಿ (ಸಂಗ್ರಹ ಚಿತ್ರ)
ಸೈಯದ್‌ ಅಲಿ ಶಾ ಗಿಲಾನಿ (ಸಂಗ್ರಹ ಚಿತ್ರ)   

ಕಾಶ್ಮೀರ: ಪ್ರತ್ಯೇಕತಾವಾದಿ ನಾಯಕ ಸೈಯದ್‌ ಅಲಿ ಶಾ ಗಿಲಾನಿ ಅವರ ಆರೋಗ್ಯ ಸ್ಥಿತಿ ಬಗ್ಗೆ ವದಂತಿ ಹರಿದಾಡದಂತೆ ನಿಯಂತ್ರಿಸಲು ಕಾಶ್ಮೀರದಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆಗಳನ್ನು ಗುರುವಾರ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

90ರ ಹರೆಯದ ಗಿಲಾನಿ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಪೋಸ್ಟ್ ಮಾಡಿದ್ದರು. ಈ ಹಿನ್ನಲೆಯಲ್ಲಿ ಬುಧವಾರ ತಡರಾತ್ರಿ ಇಂಟರ್‌ನೆಟ್ ಸ್ಥಗಿತಗೊಳಿಸಿಲಾಗಿದೆ.

ಅದೇ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಪಡೆಯನ್ನು ನಿಯೋಜನೆಗೊಳಿಸಲಾಗಿದೆ.

ADVERTISEMENT

ಆದಾಗ್ಯೂ, ಗಿಲಾನಿಯವರು ಕೆಲ ಕಾಲ ಅನಾರೋಗ್ಯದಿಂದಿದ್ದರು ಆದರೆ ಈಗ ಅವರ ಆರೋಗ್ಯ ಸ್ಥಿರವಾಗಿದೆ ಎಂದುಕುಟುಂಬ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.