ADVERTISEMENT

ದೆಹಲಿ ಪಾಲಿಕೆಯಲ್ಲಿ AAP ಅಧಿಕಾರಕ್ಕೆ ಬಂದರೆ RWAಗೆ ಮಿನಿ ಕೌನ್ಸಿಲರ್‌’ ಸ್ಥಾನಮಾನ

ಪಿಟಿಐ
Published 29 ನವೆಂಬರ್ 2022, 13:19 IST
Last Updated 29 ನವೆಂಬರ್ 2022, 13:19 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌   

ನವದೆಹಲಿ (ಪಿಟಿಐ): ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಮ್‌ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ (ಆರ್‌ಡಬ್ಲ್ಯುಎ) ರಾಜಕೀಯ ಮತ್ತು ಹಣಕಾಸು ಅಧಿಕಾರ ನೀಡಲಾಗುತ್ತದೆ. ಅವುಗಳಿಗೆ ‘ಮಿನಿ ಕೌನ್ಸಿಲರ್‌’ ಸ್ಥಾನಮಾನ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮಂಗಳವಾರ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರನ್ನೇ ದೆಹಲಿಯ ಮಾಲೀಕರನ್ನಾಗಿ ಮಾಡುವುದು ಈ ದೂದೃಷ್ಟಿಯ ಹಿಂದಿನ ಉದ್ದೇಶ’ ಎಂದು ಹೇಳಿದರು.

ದೆಹಲಿಯ ಮಹಾನಗರ ಪಾಲಿಕೆಗೆ ಡಿ.4ರಂದು ಚುನಾವಣೆ, ಡಿ.7ರಂದು ಮತ ಎಣಿಕೆ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.