
ತಿರುವನಂತಪುರ: ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಯುಡಿಎಫ್‌ನ ಸಂಯೋಜಕ ಹಾಗೂ ಕಾಂಗ್ರೆಸ್‌ನ ಸಂಸದರಾಗಿರುವ ಅಡೂರು ಪ್ರಕಾಶ್ ಅವರನ್ನು ವಿಶೇಷ ತನಿಖಾ ತಂಡವು (ಎಸ್‌ಐಟಿ) ಶನಿವಾರ ಇಲ್ಲಿ ಎರಡು ಗಂಟೆ ವಿಚಾರಣೆ ನಡೆಸಿತು.
ವಿಚಾರಣೆಗೆ ಸಂಬಂಧಿಸಿದಂತೆ ಪ್ರಕಾಶ್ ಅವರಿಗೆ ನೋಟಿಸ್ ಜಾರಿಗೊಳಿಸಿದ್ದರಿಂದ ಇಲ್ಲಿನ ಅಪರಾಧ ವಿಭಾಗದ ಕೇಂದ್ರ ಕಚೇರಿಗೆ ಬೆಳಿಗ್ಗೆಯೇ ಪ್ರಕಾಶ್ ಹಾಜರಾಗಿದ್ದರು. ಜತೆಗೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಉಣ್ಣಿಕೃಷ್ಣನ್ ಪೋಟಿ ಅವರನ್ನೂ ಎಸ್‌ಐಟಿ ತಂಡ ನಡೆಸಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಕಾಶ್, ‘ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಬೇಕು ಎಂದು ಎಸ್‌ಐಟಿ ಅಧಿಕಾರಿಗಳು ಸೂಚಿಸಿದ್ದರಿಂದ ಶುಕ್ರವಾರವೇ ಕಾಸರಗೋಡಿನಿಂದ ಹಿಂದಿರುಗಿದ್ದೆ. ಇಂದು ಬೆಳಿಗ್ಗೆ ಇಲ್ಲಿಗೆ ಹಾಜರಾಗಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಸ್ಪಷ್ಟ ಉತ್ತರ ನೀಡಿದ್ದಾರೆ. ಅವುಗಳನ್ನು ಆಧರಿಸಿ ಮುಂದಿನ ಕ್ರಮ ತೆಗದುಕೊಳ್ಳಲಿದ್ದಾರೆ’ ಎಂದು ತಿಳಿಸಿದರು.
ಉಣ್ಣಿಕೃಷ್ಣನ್ ಅವರ ಜತೆಯಲ್ಲೇ ವಿಚಾರಣೆ ನಡೆಸಿದರೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್, ‘ಅವರ ಉಪಸ್ಥಿತಿಯಲ್ಲಿ ವಿಚಾರಣೆ ನಡೆಸಲಿಲ್ಲ. ವಿಚಾರಣೆಯಲ್ಲಿ ಅಸಹಜ ಎನ್ನುವಂತಹ ಯಾವ ನಡವಳಿಕೆಯೂ ಕಾಣಲಿಲ್ಲ’ ಎಂದು ಹೇಳಿದರು.
‘ನ್ಯಾಯ ಸಿಗುವವರೆಗೂ ಹೋರಾಟ’ (ಕೊಚ್ಚಿ ವರದಿ)’: ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ನ್ಯಾಯ ದೊರೆಯುವವರೆಗೂ ಬಿಜೆಪಿ ಹೋರಾಟ ನಡೆಸಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಶನಿವಾರ ಹೇಳಿದರು.
ಶ್ರೀ ಆದಿ ಶಂಕರ ಪುಣ್ಯಭೂಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ, ‘ಕೇರಳದ ಜನರಿಗೆ ಒಳಿತಾಗಲಿ. ಈ ಪ್ರಕಣದಲ್ಲಿ ನ್ಯಾಯ ಸಿಗಲಿ ಎಂದು ಜನರ ಪರವಾಗಿ ಪ್ರಾರ್ಥಿಸಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.