ಶಬರಿಮಲೆ
– ಪಿಟಿಐ ಚಿತ್ರ
ಪತ್ತನಂತಿಟ್ಟ (ಕೇರಳ): ಶಬರಿಮಲೆ ಅಯ್ಯಪ್ಪ ದೇವಾಲಯದ ವಾರ್ಷಿಕ ಮಕರವಿಳಕ್ಕು ಉತ್ಸವ ಬುಧವಾರ ನಡೆಯಲಿದ್ದು, ಪೂರ್ವಭಾವಿಯಾಗಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ.
ಹಬ್ಬದ ದಿನ ದೇವಾಲಯದಲ್ಲಿ ಸುಮಾರು 2000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ದೇವಾಲಯವನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಂಗಳವಾರ ಹೇಳಿದೆ.
‘ಹೈಕೋರ್ಟ್ ಆದೇಶದಂತೆ, ಮಕರವಿಳಕ್ಕು ದಿನದಂದು ಸನ್ನಿಧಾನಂ (ದೇವಾಲಯ ಸಂಕೀರ್ಣ) ಪ್ರವೇಶವನ್ನು ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ 30,000 ಯಾತ್ರಾರ್ಥಿಗಳಿಗೆ ಮತ್ತು ಸ್ಟಾಟ್ ಬುಕಿಂಗ್ ಮೂಲಕ 5000 ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ’ ಎಂದು ಅದು ಹೇಳಿದೆ.
ಸನ್ನಿಧಾನಂ, ಪಂಪಾ ಮತ್ತು ಇತರ ಸೂಕ್ಷ್ಮ ಸ್ಥಳಗಳಲ್ಲಿ ಅಗ್ನಿಶಾಮಕ, ಆಂಬುಲೆನ್ಸ್‌ಗಳು ಮತ್ತು ಇತರ ರಕ್ಷಣಾ ಸೇವೆಗಳ ಘಟಕಗಳ ತಂಡಗಳನ್ನು 31 ವಾಹನಗಳೊಂದಿಗೆ ನಿಯೋಜಿಸಲಾಗಿದೆ ಎಂದು ಟಿಡಿಬಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.