ADVERTISEMENT

ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಕ್ಕೆ ಹೊರಟ ಮಹಿಳೆ ಮನೆ ಮೇಲೆ ದಾಳಿ

ಟ್ವಿಟ್ ಮಾಡಿದ ಪತಿ

ಏಜೆನ್ಸೀಸ್
Published 19 ಅಕ್ಟೋಬರ್ 2018, 10:47 IST
Last Updated 19 ಅಕ್ಟೋಬರ್ 2018, 10:47 IST
   

ತಿರುವನಂತಪುರಂ: ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಮುಂದಾದ ಸಾಮಾಜಿಕ ಕಾರ್ಯಕರ್ತೆರೆಹನಾ ಫಾತೀಮಾ ಅವರ ಎರ್ನಾಕುಲಮ್‌ನ ಪಣಮ್‌ಪಿಲ್ಲಿಯಲ್ಲಿರುವ ಮನೆಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ಮನೆಯ ಸಾಮಾಗ್ರಿಗಳನ್ನು ಧ್ವಂಸ ಮಾಡಿದ್ದಾರೆ.

ಈ ಬಗ್ಗೆ ಫಾತೀಮಾ ಅವರ ಪತಿ ಮನೋಜ್ ಶ್ರೀಧರ್ ಟ್ವಿಟ್ ಮಾಡಿದ್ದಾರೆ.

ಫಾತೀಮಾ ಅವರು ಟೆಲಿಕಾಂ ಉದ್ಯೋಗಿ. ಹಾಗಾಗಿ ಬಿಎಸ್ಎನ್‌ಎಲ್ ಕ್ವಾಟ್ರಸ್‌ನಲ್ಲಿ ವಾಸವಿದ್ದರು.

ADVERTISEMENT

ಸುಮಾರು ಬೆಳಿಗ್ಗೆ 8 ಗಂಟೆಗೆ ಮನೆಯ ಒಳಗೆ ನುಗ್ಗಿದ ಇಬ್ಬರು ಕಿಡಿಗೇಡಿಗಳು ಮನೆಯ ಸಾಮಾಗ್ರಿಗಳನ್ನು ನಾಶಗೊಳಿಸಿದ್ದಾರೆ. ಇವರಿಬ್ಬರೂ ಹೆಲ್ಮೆಟ್‌ ಧರಿಸಿದ್ದರು ಎಂದು ತಿಳಿದು ಬಂದಿದೆ. ಈಗಾಗಲೇ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ ಫಾತೀಮಾ ಮನೆಯ ಬಳಿ ಪ್ರತಿಭಟನೆ ಕೈಗೊಳ್ಳಲು ಆಗಮಿಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ತಡೆಹಿಡಿಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.