ADVERTISEMENT

ಬಾಗಿಲು ತೆರೆದ ಅಯ್ಯಪ್ಪ ದೇಗುಲ; ಮಹಿಳೆಯರ ಪ್ರವೇಶಕ್ಕೆ ಅವಕಾಶ ಸಿಗಲಿದೆಯೇ?

ಏಜೆನ್ಸೀಸ್
Published 5 ನವೆಂಬರ್ 2018, 12:11 IST
Last Updated 5 ನವೆಂಬರ್ 2018, 12:11 IST
   

ತಿರುವನಂತಪುರ: ಎಲ್ಲ ವಯಸ್ಸಿನ ಮಹಿಳೆಯರಿಗೆ ದೇಗುಲಕ್ಕೆ ಪ್ರವೇಶ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲು ಎರಡನೇ ಬಾರಿ ತೆರೆಯಲಾಗಿದೆ.

ತಿರುವಾಂಕೂರು ರಾಜಮನೆತನದ ಕೊನೆಯ ರಾಜ ಚಿತ್ತಿರ ತಿರುನಾಳ್‌ ಬಲರಾಮ ವರ್ಮ ಅವರ ಜನ್ಮದಿನದ ಪ್ರಯುಕ್ತ ನಡೆಸುವ ‘ಚಿತ್ತಿರ ಆಟ್ಟವಿಶೇಷಂ’ ಅಂಗವಾಗಿ ದೇಗುಲದ ಬಾಗಿಲನ್ನು ತೆರೆಯಲಾಗಿದೆ.

ಸತತ ಐದು ಗಂಟೆಗಳ ಕಾಲ ಪೂಜೆ ನಡೆಯಲಿದ್ದು, ರಾತ್ರಿ 10ಕ್ಕೆ ಬಾಗಿಲನ್ನು ಮುಚ್ಚಲಾಗುತ್ತದೆ.

ADVERTISEMENT

ನಿಳಕಲ್ ಮತ್ತು ಪಂಬಾ ಇನ್ನಿತರ ಪ್ರದೇಶಗಳಲ್ಲಿ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ. ಇನ್ನು ಏರುಮೇಲಿಯಲ್ಲಿ ಮುಂಜಾನೆಯಿಂದ ಅಯ್ಯಪ್ಪನ ಭಕ್ತಾಧಿಗಳು ಮಂತ್ರಗಳನ್ನು ಪಠಿಸುತ್ತಿದ್ದು, ರಸ್ತೆಗಳು ಭಕ್ತರಿಂದ ತುಂಬಿ ಹೋಗಿದೆ. ಮೂಲ ಶಿಬಿರಕ್ಕೆ ಉದ್ದೇಶಪೂರ್ವಕವಾಗಿ ಬಸ್ಸ್‌ಗಳ ಸಂಚಾರವನ್ನು ತಡವಾಗಿ ಆರಂಭಿಸಲಾಗಿದೆ ಎಂದು ರಾಜ್ಯ ಸಾರಿಗೆ ಸಮಿತಿ ಹೇಳಿದೆ.

ಭದ್ರತೆಗೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.