ADVERTISEMENT

ಕುಟುಂಬ ಸಮೇತರಾಗಿ ಮತ ಚಲಾಯಿಸಿದ ಸಚಿನ್ ತೆಂಡೂಲ್ಕರ್

ಸಾರಾ, ಅರ್ಜುನ್‌ಗೆ ಮೊದಲ ಲೋಕಸಭಾ ಚುನಾವಣೆ

ಏಜೆನ್ಸೀಸ್
Published 29 ಏಪ್ರಿಲ್ 2019, 11:12 IST
Last Updated 29 ಏಪ್ರಿಲ್ 2019, 11:12 IST
   

ಮುಂಬೈ:ಇಲ್ಲಿನಬಾಂದ್ರಾ ಲೋಕಸಭಾ ಚುನಾವಣಾ ಕ್ಷೇತ್ರದಲ್ಲಿ ಕುಟುಂಬ ಸಮೇತರಾಗಿ ಮತ ಚಲಾಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ತಮ್ಮಿಬ್ಬರು ಮಕ್ಕಳು ಇದೇ ಮೊದಲ ಬಾರಿ ಮತದಾನ ಮಾಡಿರುವ ಸಂತಸವನ್ನು ಹಂಚಿಕೊಂಡಿದ್ದಾರೆ.

‘ಈ ಬಾರಿಯ ಚುನಾವಣೆ ತುಂಬಾ ವಿಶೇಷ. ಏಕೆಂದರೆ ಮಕ್ಕಳಾದ ಸಾರಾ ತೆಂಡೂಲ್ಕರ್ ಹಾಗೂ ಅರ್ಜುನ್ ತೆಂಡೂಲ್ಕರ್‌ಗೆ ಇದೇ ಮೊದಲ ಚುನಾವಣೆ. ಹಾಗಾಗಿ ನಾವೆಲ್ಲರೂ ಒಟ್ಟಾಗಿ ಬಂದು ಮತ ಚಲಾವಣೆ ಮಾಡಿದ್ದೇವೆ. ಪ್ರತಿಯೊಬ್ಬರು ರಾಷ್ಟ್ರದ ಹಿತಾಸಕ್ತಿಯಿಂದ ಮತದಾನ ಮಾಡಲೇಬೇಕು’ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಮತದಾನ ಮಾಡಿ ಹೊರಬಂದ ನಂತರ ಸಚಿನ್, ಪತ್ನಿ ಅಂಜಲಿ ತೆಂಡೂಲ್ಕರ್ಮಕ್ಕಳ ಜೊತೆಬೆರಳಿಗೆ ಹಾಕಿದ ಶಾಹಿಯ ಗುರುತನ್ನು ತೋರಿಸಿ ಸಂಭ್ರಮ ಹಂಚಿಕೊಂಡಿದ್ದಾರೆ.

ADVERTISEMENT

ಅರ್ಜುನ್ ತಮ್ಮ ತಂದೆಯ ಹಾದಿಯನ್ನು ಅನುಸರಿಸಿದ್ದು, ಇನ್ನು ಮಗಳು ಸಾರಾ ಲಂಡನ್‌ನಲ್ಲಿ ವೈದಕೀಯ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಅಮೀರ್ ಖಾನ್ ಹಾಗೂ ಅವರ ಪತ್ನಿ ಜೊತೆ ಬಂದು ಮತ ಚಲಾಯಿಸಿದ್ದಾರೆ.

ಒಂಬತ್ತು ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಏಳು ಹಂತಗಳ ಮತದಾನಕ್ಕೆ ಮೇ 17ರಂದು ತೆರೆ ಬೀಳಲಿದ್ದು, ಮೇ 23ರಂದು ಫಲಿತಾಂಶ ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.