ADVERTISEMENT

2013ರ ಗಲಭೆ ಪ್ರಕರಣ: ಸಾಧ್ವಿ ಪ್ರಾಚಿ ನ್ಯಾಯಾಲಯಕ್ಕೆ ಶರಣು

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 14:19 IST
Last Updated 13 ಜನವರಿ 2023, 14:19 IST

ಮುಜಾಫರ್‌ನಗರ (ಯುಪಿ): 2013ರ ಮುಜಾಫರ್‌ನಗರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ವಿಫಲರಾದ ವಿಎಚ್‌ಪಿ ನಾಯಕಿ ಸಾಧ್ವಿ ಪ್ರಾಚಿ ವಿರುದ್ಧ ಜಾಮೀನು ರಹಿತ ವಾರಂಟ್‌ ಹೊರಡಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಅವರು ವಿಶೇಷ ಸಂಸದ/ ಶಾಸಕ ನ್ಯಾಯಾಲಯಕ್ಕೆ ಹಾಜರಾದರು.

2013ರ ಆಗಸ್ಟ್‌ನಲ್ಲಿ ನಾಗಲಾ ಮಾಡೋರ್ ಗ್ರಾಮದಲ್ಲಿ ನಡೆದ 'ಮಹಾಪಂಚಾಯತ್'ನಲ್ಲಿ ಭಾಗವಹಿಸಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿ, ನಿಷೇಧಾಜ್ಞೆ ಉಲ್ಲಂಘನೆ ಮತ್ತು ಕೋಮು ಗಲಭೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಸಾಧ್ವಿ ಅವರ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಮಯಾಂಕ್ ಜೈಸ್ವಾಲ್ ವಾರಂಟ್‌ ಅನ್ನು ಹಿಂಪಡೆದು, ಜನವರಿ 20ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದರು.

ಕೇಂದ್ರ ಸಚಿವ ಸಂಜೀವ್ ಬಲ್ಯಾನ್, ಬಿಜೆಪಿ ಮಾಜಿ ಸಂಸದ ಭರತೇಂದು ಸಿಂಗ್, ಬಿಜೆಪಿ ಮಾಜಿ ಶಾಸಕ ಉಮೇಶ್ ಮಲಿಕ್, ಗಾಜಿಯಾಬಾದ್‌ನ ದಾಸ್ನಾದೇವಿ ದೇವಸ್ಥಾನದ ಅರ್ಚಕ ಆಚಾರ್ಯ ನರ್ಶಿಗಾನಂದ್, ಮಾಜಿ ಬ್ಲಾಕ್ ಪ್ರಮುಖ್ ವೀರೇಂದ್ರ ಸಿಂಗ್ ಸೇರಿದಂತೆ ಹಲವು ಆರೋಪಿಗಳು ನಿಷೇಧಾಜ್ಞೆ ಉಲ್ಲಂಘನೆ ಆರೋಪ ಎದುರಿಸುತ್ತಿದ್ದಾರೆ. ಈ ಗಲಭೆಯಲ್ಲಿ 60 ಜನರು ಮೃತರಾಗಿದ್ದು, 40,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.