ತಾಜ್‌ಮಹಲ್
ಲಖನೌ: ಹಿಂದೂ ಸಂಘಟನೆಯಾದ ‘ಅಖಿಲ ಭಾರತ ಹಿಂದೂ ಮಹಾಸಭಾ’ದ (ಎಐಎಚ್‌ಎಂ) ಇಬ್ಬರು ಕಾರ್ಯಕರ್ತರು ಶನಿವಾರ ತಾಜ್ ಮಹಲ್‌ಗೆ ತೆರಳಿ ನೆಲಮಾಳಿಗೆಯಲ್ಲಿರುವ ಸಮಾಧಿ ಬಳಿ ‘ಗಂಗಾಜಲ’ವನ್ನು ಪ್ರೋಕ್ಷಿಸಿದರು.
ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು (ಸಿಐಎಸ್‌ಎಫ್) ಗಂಗಾಜಲ ಪ್ರೋಕ್ಷಿಸಿದ ಮಹಾಸಭಾದ ವಿನೇಶ್ ಚೌಧರಿ ಹಾಗೂ ಶ್ಯಾಮ್ ಕುಮಾರ್ ಅವರನ್ನು ವಶಕ್ಕೆ ಪಡೆದು, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ‘ನೆಲಮಾಳಿಗೆ ಇರುವ ಜಾಗದಲ್ಲಿ ಮೊದಲು ಶಿವಮಂದಿರ ಇತ್ತು. ಮಂದಿರವನ್ನು ಕೆಡವಿ ಶಹಜಹಾನ್ ರಾಜ ಮಸೀದಿ ನಿರ್ಮಿಸಿದ್ದಾರೆ’ ಎನ್ನುವುದು ಹಿಂದೂ ಕಾರ್ಯಕರ್ತರ ವಾದ. ಈ ಜಾಗವನ್ನು ಅವರು ‘ತೇಜೋ ಮಹಾಲಯ’ ಎಂದು ಕರೆಯುತ್ತಾರೆ.
ಗಂಗಾಜಲವನ್ನು ಪ್ರೋಕ್ಷಣೆ ಮಾಡಿರುವ ವಿಡಿಯೊವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಇಬ್ಬರ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಶಿವರಾತ್ರಿಯಂದು ಶಿವ ಚಾಲೀಸಾ ಪಠಿಸಿದ್ದರು; ತಾಜ್ ಮಹಲ್ ಒಳಗೆ ಕೇಸರಿ ಧ್ವಜ ಹಾರಿಸಿದ ಘಟನೆಯೂ ಈ ಹಿಂದೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.