ADVERTISEMENT

ಡಿ.ಎಸ್.ನಾಗಭೂಷಣ್ ಅವರ 'ಗಾಂಧಿ ಕಥನ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2021, 7:33 IST
Last Updated 30 ಡಿಸೆಂಬರ್ 2021, 7:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು ನೀಡುವ ಈ ಸಾಲಿನ ವರ್ಷದ ಪುಸ್ತಕ ಪ್ರಶಸ್ತಿಗೆ, ಕನ್ನಡದ ಪ್ರಮುಖ ಲೇಖಕರಾದ ಡಿ.ಎಸ್. ನಾಗಭೂಷಣ್ ಅವರ 'ಗಾಂಧಿ ಕಥನ' ಕೃತಿಯುಆಯ್ಕೆಯಾಗಿದೆ.

ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ನೀಡುವ ಪ್ರಶಸ್ತಿಯನ್ನುಕೇಂದ್ರ ಸಾಹಿತ್ಯ ಅಕಾಡೆಮಿಯು ಇಂದು (ಡಿ.30) ಪ್ರಕಟಿಸಿದೆ.

ಬಸು ಬೇವಿನಗಿಡದ ಅವರು ಮಕ್ಕಳಿಗಾಗಿ ಬರೆದಿರುವ 'ಓಡಿ ಹೋದ ಹುಡುಗ' ಕಾದಂಬರಿ'ಬಾಲ ಪುರಸ್ಕಾರ'ಕ್ಕೆ ಆಯ್ಕೆಯಾಗಿದೆ. ಎಚ್. ಲಕ್ಷ್ಮೀನಾರಾಯಣ ಸ್ವಾಮಿ ಅವರ 'ತೊಗಲ ಚೀಲದ ಕರ್ಣ' ಮಹಾಕಾವ್ಯಕ್ಕೆ 'ಯುವ ಪುರಸ್ಕಾರ' ಲಭಿಸಿದೆ.

ADVERTISEMENT

ಮುಖ್ಯ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಮತ್ತುಯುವ, ಬಾಲ ಪುರಸ್ಕಾರಗಳು ಐವತ್ತು ಸಾವಿರ ರೂಪಾಯಿ ಜೊತೆಗೆ ಸನ್ಮಾನವನ್ನು ಒಳಗೊಂಡಿರುತ್ತವೆ.

ಪ್ರಶಸ್ತಿ ಪಡೆದ ಪುಸ್ತಕಗಳು (ಒಳಚಿತ್ರಗಳಲ್ಲಿ –ಲೇಖಕರು)

ಸಾಹಿತಿಕಮಲಾ ಹಂಪನಾ, ಜಗದೀಶ್ ಕೊಪ್ಪ ಹಾಗೂ ವಿಜಯಕುಮಾರಿ ಅವರು ಯುವ ಸಾಹಿತ್ಯ ಪ್ರಶಸ್ತಿಯ ತೀರ್ಪುಗಾರರಾಗಿದ್ದರು. ಟಿ.ಪಿ. ಅಶೋಕ, ಮಾಲತಿ ಪಟ್ಟಣಶೆಟ್ಟಿ ಹಾಗೂ ಎಸ್ ದಿವಾಕರಅವರು ಬಾಲ ಸಾಹಿತ್ಯ ಪ್ರಶಸ್ತಿ ವಿಭಾಗದ ತೀರ್ಪುಗಾರರಾಗಿದ್ದರು.

ಪ್ರಮುಖ ಕೃತಿ ಆಯ್ಕೆಯ ತೀರ್ಪುಗಾರರಾಗಿ ಬೊಳುವಾರ್ ಮಹಮ್ಮದ ಕುಂಯಿ, ಅಮರೇಶ ನುಗಡೋಣಿ ಹಾಗೂ ಸಬೀಹಾ ಭೂಮಿಗೌಡ ಅವರಿದ್ದರು.

ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸಂಯೋಜಕರಾದಸರಜೂ ಕಾಟ್ಕರ್ ಅವರ ಉಸ್ತುವಾರಿಯಲ್ಲಿ ಪುಸ್ತಕ ಆಯ್ಕೆ ಪ್ರಕ್ರಿಯೆಯು ನಡೆಯಿತು.

ರಾಷ್ಟ್ರ ರಾಜಧಾನಿಯಲ್ಲಿಫೆಬ್ರುವರಿಯಲ್ಲಿ ಪ್ರಶಸ್ತಿ ಪ್ರದಾನಸಮಾರಂಭ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.