ADVERTISEMENT

ಸೈಫ್ ಮೇಲೆ ದಾಳಿ | ಸಿಸಿಟಿವಿಯಲ್ಲಿ ದಾಖಲಾಗಿದ್ದು ಆರೋಪಿಯದ್ದೇ ಮುಖ: ಪೊಲೀಸರು

ಪಿಟಿಐ
Published 31 ಜನವರಿ 2025, 10:03 IST
Last Updated 31 ಜನವರಿ 2025, 10:03 IST
<div class="paragraphs"><p>ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲಿನ ಹಲ್ಲೆ ಪ್ರಕರಣದ ಆರೋಪಿ&nbsp;ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್‌</p></div>

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲಿನ ಹಲ್ಲೆ ಪ್ರಕರಣದ ಆರೋಪಿ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್‌

   

– ಪಿಟಿಐ ಚಿತ್ರ

ಮುಂಬೈ: ನಟ ಸೈಫ್ ಅಲಿ ಖಾನ್ ಅವರ ಮೇಲೆ ಚಾಕು ಇರಿತ ಪ್ರಕರಣದಲ್ಲಿ ಬಂಧಿತನಾಗಿರುವ ಅರೋಪಿ ಬಾಂಗ್ಲಾದೇಶ ಪ್ರಜೆಯ ಚಹರೆಯು, ಫೇಸ್ ರೆಕಗ್ನಿಷನ್ ಪರೀಕ್ಷೆಯಲ್ಲಿ ಸಿಸಿಟಿವಿಯಲ್ಲಿ ದಾಖಲಾದ ಮುಖಕ್ಕೆ ಹೋಲಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪರೀಕ್ಷೆಯ ವರದಿಯ ಪ್ರಕಾರ, ಪ್ರಕರಣದಲ್ಲಿ ಜ.16ರಂದು ಬಂಧಿತನಾಗಿರುವ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೊಹಿಲ್ಲಾ ಅಮಿನ್ ಫಕೀರ್ (30) ಮುಖ ಬಾಂದ್ರಾದ ಸದ್ಗುರು ಶರಣ್ ಕಟ್ಟಡದ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪರೀಕ್ಷೆಯಲ್ಲಿ ಅದು ಅವನದ್ದೇ ಎಂದು ಧೃಡಪಟ್ಟಿದ್ದಾಗಿ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಫೇಷಿಯಲ್ ರೆಕಗ್ನಿಷನ್ ತಂತ್ರಜ್ಞಾನವು ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿದ್ದಾರೆ.

ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.