ADVERTISEMENT

ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಜೈಲಿನಿಂದ ಬಿಡುಗಡೆ

ಪಿಟಿಐ
Published 20 ಮೇ 2022, 5:04 IST
Last Updated 20 ಮೇ 2022, 5:04 IST
ಅಜಂ ಖಾನ್: ಪಿಟಿಐ ಚಿತ್ರ
ಅಜಂ ಖಾನ್: ಪಿಟಿಐ ಚಿತ್ರ   

ಲಖನೌ: ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ಉತ್ತರ ಪ್ರದೇಶದ ಸೀತಾಪುರ್ ಜಿಲ್ಲೆಯ ಜೈಲಿನಿಂದ ಶುಕ್ರವಾರ ಬಿಡುಗಡೆ ಆಗಿದ್ದಾರೆ.

87 ಪ್ರಕರಣಗಳಲ್ಲಿ ಅಜಂ ಖಾನ್ ಬಿಡುಗಡೆಗೆ ಆದೆಶ ಮಾಡಲಾಗಿರುವುದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಸಂವಿಧಾನದ 142ನೇ ವಿಧಿಯ ವಿಶೇಷ ಅಧಿಕಾರವನ್ನು ಬಳಸಿಕೊಂಡು ಅಜಂಖಾನ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

ಅಜಂ ಖಾನ್ ಅವರ ಪುತ್ರ ಮತ್ತು ಶಾಸಕ ಅಬ್ದುಲ್ಲಾ ಅಜಂ, ಪ್ರಗತಿಶೀಲ ಸಮಾಜವಾದಿ ಪಕ್ಷದ (ಲೋಹಿಯಾ) ನಾಯಕ ಶಿವಪಾಲ್ ಸಿಂಗ್ ಯಾದವ್ ಮತ್ತು ಬೆಂಬಲಿಗರು ಸಮಾಜವಾದಿ ಪಕ್ಷದ ಹಿರಿಯ ನಾಯಕನನ್ನು ಬರಮಾಡಿಕೊಂಡರು.

ADVERTISEMENT

ಬಿಡುಗಡೆಯ ನಂತರ ಅವರು ತಮ್ಮ ಹುಟ್ಟೂರಾದ ರಾಂಪುರಕ್ಕೆ ತೆರಳಿದರು.

ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಬಿಡುಗಡೆ ಆದೇಶ ಜೈಲಿ ತಲುಪಿದ್ದು, ಎಲ್ಲಾ ಪ್ರಕ್ರಿಯೆಗಳ ನಂತರ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಅಜಂ ಖಾನ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಸೀತಾಪುರ ಜೈಲಿನ ಜೈಲರ್ ಆರ್ ಎಸ್ ಯಾದವ್ ತಿಳಿಸಿದ್ದಾರೆ.

ಭೂಕಬಳಿಕೆ ಸೇರಿದಂತೆ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ 27 ತಿಂಗಳಿಂದ ಅಜಂ ಖಾನ್ ಜೈಲಿನಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.