ADVERTISEMENT

ಸಂಜಯ್ ಕಪೂರ್ ಉಯಿಲಿನ ವಿಚಾರಣೆ: ಸಹೋದರಿ ಮಂದಿರಾ ಹೆಸರು ಕೈಬಿಡಲು ಪತ್ನಿ ಮನವಿ

ಪಿಟಿಐ
Published 12 ಸೆಪ್ಟೆಂಬರ್ 2025, 14:13 IST
Last Updated 12 ಸೆಪ್ಟೆಂಬರ್ 2025, 14:13 IST
   

ನವದೆಹಲಿ: ದಿವಂಗತ ಉದ್ಯಮಿ ಸಂಜಯ್‌ ಕಪೂರ್ ಅವರ ಉಯಿಲಿನ ವಿಚಾರಣೆ ವೇಳೆ ಹೊರಡಿಸಿರುವ ಆದೇಶದಲ್ಲಿ ಅವರ ಸಹೋದರಿ ಮಂದಿರಾ ಕಪೂರ್ ಹೆಸರನ್ನು ತೆಗೆಯುವಂತೆ ಸಂಜಯ್‌ ಪತ್ನಿ ಪ್ರಿಯಾ ಕಪೂರ್‌ ಸಲ್ಲಿಸಿರುವ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ಪುರಸ್ಕರಿಸಿದೆ.

‘ಮಂದಿರಾ ಅವರು ಈ ಪ್ರಕರಣದಲ್ಲಿ ಪಕ್ಷಗಾರರಲ್ಲ. ಅವರು ಅರ್ಜಿ ಸಲ್ಲಿಸದೇ ಪ್ರಕರಣದಲ್ಲಿ ಹಿಂಬಾಗಿನಲಿಂದ ಪ್ರವೇಶ ಪಡೆಯಲು ಪ್ರಯತ್ನಿಸಿದಂತಿದೆ. ಅದಕ್ಕೆ ಅವಕಾಶ ನೀಡಬಾರದು’ ಎಂದು ಪ್ರಿಯಾ ಮತ್ತು ಅವರ ಅಪ್ರಾಪ್ತ ವಯಸ್ಸಿನ ಮಗನ ಪರ ವಕೀಲ ರಾಜೀವ್‌ ನಾಯರ್‌ ಪ್ರತಿಪಾದಿಸಿದರು.

ಸಂಜಯ್‌ ಅವರ ಮಾಜಿ ಪತ್ನಿ ಕರಿಷ್ಮಾ ಕಪೂರ್‌ ಅವರ ಇಬ್ಬರು ಮಕ್ಕಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜ್ಯೋತಿ ಸಿಂಗ್‌ ನಡೆಸುತ್ತಿದ್ದಾರೆ. ಸಂಜಯ್‌ ಅವರ ಉಯಿಲನ್ನು ಪ್ರಶ್ನಿಸಿ ಮತ್ತು ₹30,000 ಕೋಟಿ ಮೌಲ್ಯದ ಆಸ್ತಿಯಲ್ಲಿ ಪಾಲು ನೀಡುವಂತೆ ಮಕ್ಕಳು ಅರ್ಜಿಯಲ್ಲಿ ಕೋರಿದ್ದಾರೆ.

ADVERTISEMENT

ಸಂಜಯ್‌ ಅವರು ನಿಧನ ಹೊಂದಿದ ದಿನದವರೆಗೆ (ಜೂನ್‌ 12) ಅವರ ಹೆಸರಿನಲ್ಲಿದ್ದ ಸ್ಥಿರ ಮತ್ತು ಚರ ಆಸ್ತಿಗಳನ್ನು ಬಹಿರಂಗಪಡಿಸುವಂತೆ ನ್ಯಾಯಮೂರ್ತಿ ಸೆಪ್ಟೆಂಬರ್‌ 10ರಂದು ಪ್ರಿಯಾ ಅವರಿಗೆ ನಿರ್ದೇಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.