ADVERTISEMENT

ಶಿವಸೇನಾ ನಾಯಕ ಸಂಜಯ್‌ ರಾವುತ್‌ ವಿರುದ್ಧ ಮಾನನಷ್ಟ ಮೊಕದ್ದಮೆ

₹100 ಕೋಟಿ ಪರಿಹಾರ ಕೋರಿದ ಬಿಜೆಪಿ ಮುಖಂಡ ಕಿರಿಟ್‌ ಸೋಮಯ್ಯ ಪತ್ನಿ ಮೇಧಾ

​ಪ್ರಜಾವಾಣಿ ವಾರ್ತೆ
Published 23 ಮೇ 2022, 11:11 IST
Last Updated 23 ಮೇ 2022, 11:11 IST
ಸಂಜಯ್‌ ರಾವುತ್‌
ಸಂಜಯ್‌ ರಾವುತ್‌   

ಮುಂಬೈ:ಬಿಜೆಪಿ ನಾಯಕ ಕಿರಿಟ್‌ ಸೋಮಯ್ಯ ದಂಪತಿ ಸುಮಾರು ₹100 ಕೋಟಿಯ ‘ಶೌಚಾಲಯ ಹಗರಣ’ದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದ ಶಿವಸೇನಾ ಸಂಸದ ಸಂಜಯ್‌ ರಾವುತ್‌ ವಿರುದ್ಧಕಿರಿಟ್‌ ಸೋಮಯ್ಯ ಅವರ ಪತ್ನಿ ಮೇಧಾ ಸೋಮಯ್ಯ ಹೈಕೋರ್ಟಿನಲ್ಲಿ ಸೋಮವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ರಾವುತ್‌ ಅವರು ₹100 ಕೋಟಿ ಪರಿಹಾರ ಪಾವತಿಸಬೇಕು ಅಥವಾ ಈ ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಠೇವಣಿ ಇಡಲು ನಿರ್ದೇಶನ ನೀಡುವಂತೆ ಕೋರಿ ಅವರು ಹೈಕೋರ್ಟಿಗೆ ಮನವಿ ಸಲ್ಲಿಸಿದರು.

‌‘ರಾವುತ್ ಅವರು ಪದೇ ಪದೇ ನನ್ನ ಮತ್ತು ನನ್ನ ಪತಿ ವಿರುದ್ಧ ಸಾರ್ವಜನಿಕವಾಗಿಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ. ಅದರಲ್ಲೂ ಸುಮಾರು ₹100 ಕೋಟಿಯ ಶೌಚಾಲಯ ಹಗರಣದಲ್ಲಿ ಭಾಗಿಯಾಗಿರುವುದಾಗಿ ಆರೋಪಿಸಿದ್ದಾರೆ. ರಾವುತ್ ನನ್ನ ಮತ್ತು ನನ್ನ ಕುಟುಂಬ ಸದಸ್ಯರ ವಿರುದ್ಧ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡದಂತೆ ನಿರ್ಬಂಧಿಸಿ,ಮಧ್ಯಂತರ ಪರಿಹಾರ ನೀಡಬೇಕು’ ಎಂದೂ ಮೇಧಾ ನ್ಯಾಯಾಲಯವನ್ನು ಕೋರಿದ್ದಾರೆ.

ADVERTISEMENT

ಈ ಅರ್ಜಿ ವಿಚಾರಣೆಯ ದಿನಾಂಕವನ್ನು ಹೈಕೋರ್ಟ್ ಇನ್ನೂ ನಿಗದಿಪಡಿಸಿಲ್ಲ.

‘ಮಹಾರಾಷ್ಟ್ರದ ರಾಜಧಾನಿ ಮುಂಬೈ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ಇದರಲ್ಲಿ ಬಿಜೆಪಿಯ ಮಾಜಿ ಸಂಸದಕಿರಿಟ್‌ಸೋಮಯ್ಯಮತ್ತು ಇತರ ಮುಖಂಡರು, ಬಿಲ್ಡರ್‌ಗಳು, ಉದ್ಯಮಿಗಳ ಗುಂಪು ಭಾಗಿಯಾಗಿದೆ’ ಎಂದು ಸಂಜಯ್ ರಾವುತ್ ಇತ್ತೀಚೆಗಷ್ಟೇ ಗಂಭೀರ ಆರೋಪವನ್ನೂ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.