ADVERTISEMENT

ಸಂಜಯ್‌ ವರ್ಮಾ ಕೆನಡಾದಲ್ಲಿ ಭಾರತದ ಮುಂದಿನ ಹೈಕಮಿಷನರ್‌

ಪಿಟಿಐ
Published 6 ಸೆಪ್ಟೆಂಬರ್ 2022, 11:39 IST
Last Updated 6 ಸೆಪ್ಟೆಂಬರ್ 2022, 11:39 IST

ನವದೆಹಲಿ: ಅನುಭವಿ ರಾಜತಾಂತ್ರಿಕ ಅಧಿಕಾರಿ ಸಂಜಯ್‌ ಕುಮಾರ್‌ ವರ್ಮಾ ಅವರನ್ನು ಕೆನಡಾದ ಭಾರತದ ಮುಂದಿನ ಹೈಕಮಿಷನರ್‌ ಆಗಿ ಮಂಗಳವಾರ ನೇಮಕ ಮಾಡಲಾಗಿದೆ. ಷಿಕಾಗೊದಲ್ಲಿ ಭಾರತ ಕಾನ್ಸುಲೇಟ್‌ ಜನರಲ್‌ ಆಗಿರುವ ಅಮಿತ್‌ ಕುಮಾರ್‌ ಅವರನ್ನು ರಿಪಬ್ಲಿಕ್ ಆಫ್‌ ಕೊರಿಯಾದ ಮುಂದಿನ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.

ವರ್ಮಾ ಅವರು 1988ನೇ ಬ್ಯಾಚಿನ ಐಎಎಸ್‌ ಅಧಿಕಾರಿ. ಸದ್ಯ ಜಪಾನಿನ ಭಾರತದ ರಾಯಭಾರಿಯಾಗಿದ್ದಾರೆ. ಇದಕ್ಕೂ ಮೊದಲು ಹಾಂಗ್‌ಕಾಂಗ್‌, ಚೀನಾ, ವಿಯೆಟ್ನಾಂ ಮತ್ತು ಟರ್ಕಿಯಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಕುಮಾರ್‌ 1995ನೇ ಬ್ಯಾಚಿನ ಐಎಎಸ್‌ ಅಧಿಕಾರಿ ಎಂದು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.