ಮುಜಫರ್‌ನಗರ(ಉತ್ತರ ಪ್ರದೇಶ): ಮಾಜಿ ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಅವರು ಸ್ಥಳೀಯ ಕಾಲೇಜೊಂದರಲ್ಲಿ ಕಾನೂನು ಪದವಿಗೆ ಸೇರಿಕೊಂಡಿದ್ದಾರೆ.
ಮುಜಫರ್‌ನಗರ ಕ್ಷೇತ್ರದಿಂದ 2014 ಹಾಗೂ 2019ರಲ್ಲಿ ಎರಡು ಬಾರಿ ಸಂಸದರಾಗಿದ್ದ ಸಂಜೀವ್ ಬಲ್ಯಾನ್, ಮೋದಿ ಸರ್ಕಾರದಲ್ಲಿ ಎರಡು ಬಾರಿ ರಾಜ್ಯ ಖಾತೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
‘ಸ್ಥಳೀಯ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಎಲ್‌ಎಲ್‌ಬಿ ಪದವಿಗೆ ಸೇರಿಕೊಂಡಿದ್ದೇನೆ’ಎಂದು 53 ವರ್ಷದ ಸಂಜೀವ್ ಬಲ್ಯಾನ್ ತಿಳಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯ ಅಫಡವಿಟ್ ಪ್ರಕಾರ, ಸಂಜೀವ್ ಬಲ್ಯಾನ್ ಅವರು ಚೌಧರಿ ಚರಣ್ ಸಿಂಗ್ ಹರಿಯಾಣ ಕೃಷಿ ವಿಶ್ವವಿದ್ಯಾನಿಲಯದಿಂದ ಪಶುವೈದ್ಯಕೀಯ ವಿಜ್ಞಾನ ಮತ್ತು ಪಶುಸಂಗೋಪನೆ ಪದವಿ ಪಡೆದಿದ್ದಾರೆ.
ಅದೇ ವಿಶ್ವವಿದ್ಯಾನಿಲಯದಿಂದ ಪಶುವೈದ್ಯಕೀಯ ಅಂಗರಚನಾಶಾಸ್ತ್ರದಲ್ಲಿ ಪಿ.ಎಚ್‌ಡಿ ಕೂಡ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.