ADVERTISEMENT

Sarpanch murder | ವಾಲ್ಮೀಕ್ ಕರಾಡ್‌ ಅಪರಾಧ ಕೃತ್ಯಗಳಲ್ಲಿ ಸಕ್ರಿಯ: ನ್ಯಾಯಾಲಯ

ಪಿಟಿಐ
Published 28 ಜುಲೈ 2025, 14:09 IST
Last Updated 28 ಜುಲೈ 2025, 14:09 IST
ವಾಲ್ಮೀಕ್‌ ಕರಾಡ್‌
ವಾಲ್ಮೀಕ್‌ ಕರಾಡ್‌   

ಮುಂಬೈ: ಸರಪಂಚ್‌ ಸಂತೋಷ್‌ ದೇಶಮುಖ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಾಲ್ಮೀಕ್‌ ಕರಾಡ್‌, ಕಾನೂನುಬಾಹಿರ ಚಟುವಟಿಕೆ ನಡೆಸುವ ಗ್ಯಾಂಗ್‌ವೊಂದರ ಸದಸ್ಯ ಎಂದು ವಿಶೇಷ ನ್ಯಾಯಾಲಯ ಹೇಳಿದೆ.

ಬಿಡುಗಡೆ ಮಾಡುವಂತೆ ಕೋರಿ ಕರಾಡ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು. ‘ಸಂತ್ರಸ್ತರ ಮೇಲೆ ದಾಳಿ ಮಾಡುವಾಗ ಕರಾಡ್‌ ಮತ್ತು ಇನ್ನೊಬ್ಬ ಆರೋಪಿ ವಿಡಿಯೊ ಮಾಡಿಕೊಂಡಿದ್ದರು. ಈ ಮೂಲಕ ತಮ್ಮ ಗ್ಯಾಂಗ್‌ ಬಗ್ಗೆ ಜನರಲ್ಲಿ ಭಯ ಹುಟ್ಟಿಸುತ್ತಿದ್ದರು’ ಎಂದು ನ್ಯಾಯಾಲಯವು ಹೇಳಿದೆ.

ಮಹಾರಾಷ್ಟ್ರದ ಬೀಡ್‌ ಜಿಲ್ಲೆಯಲ್ಲಿ ಸರಪಂಚ್‌ ಆಗಿದ್ದ ಸಂತೋಷ್‌ ಅವರನ್ನು ಕಳೆದ ಡಿಸೆಂಬರ್ 9ರಂದು ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕರಾಡ್‌ ಸೇರಿದಂತೆ 8 ಮಂದಿಯನ್ನು ಬಂಧಿಸಲಾಗಿದೆ.

ADVERTISEMENT

ಕರಾಡ್‌ ವಿರುದ್ಧ ಈ ಹಿಂದೆ 20 ಪ‍್ರಕರಣಗಳು ದಾಖಲಾಗಿದ್ದವು ಎಂದು ಪ್ರಾಸಿಕ್ಯೂಷನ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.