ಏರ್ ಅರೇಬಿಯಾ ವಿಮಾನ (ಸಂಗ್ರಹ ಚಿತ್ರ)
ನವದೆಹಲಿ: ‘ಸೌದಿ ಅರೇಬಿಯಾ ಪ್ರಯಾಣಿಸುವ ಭಾರತೀಯರಿಗೆ ನಿರ್ಬಂಧ ಹೇರಲಾಗಿದೆ ಎಂಬ ಮಾಹಿತಿ ಸುಳ್ಳು’ ಎಂದು ಸರ್ಕಾರದ ಮೂಲಗಳು ಸೋಮವಾರ ಖಚಿತಪಡಿಸಿವೆ.
ಈ ವಿಷಯದಲ್ಲಿ ಸೌದಿ ಸರ್ಕಾರ ಯಾವುದೇ ಅಧಿಸೂಚನೆಯ ಪ್ರಕಟಿಸಿಲ್ಲ ಎಂದೂ ಹೇಳಲಾಗಿದೆ.
ಆದರೆ ಸೌದಿ ಸರ್ಕಾರ ಭಾರತೀಯ ಪ್ರಯಾಣಿಕರಿಗೆ ನಿರ್ಬಂಧ ಹೇರಿದೆ ಎಂದು ಕೆಲವೆಡೆ ವರದಿಯಾಗಿತ್ತು. ಅದಕ್ಕೆ ಸ್ಪಷ್ಟೀಕರಣ ನೀಡಲಾಗಿದೆ.
‘ಹಜ್ ಯಾತ್ರೆಯ ಸಂದರ್ಭದಲ್ಲಿ ಜನದಟ್ಟಣೆ ನಿಯಂತ್ರಿಸುವ ಸಲುವಾಗಿ ಅಲ್ಪಾವಧಿಗೆ ವಿಸಾ ತಡೆಹಿಡಿಯುವ ಪದ್ಧತಿ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಹಜ್ ಅವಧಿ ಮುಗಿಯುತ್ತಿದ್ದಂತೆ ಅದು ಕೊನೆಗೊಳ್ಳುತ್ತದೆ’ ಎಂದು ಸರ್ಕಾರದ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.