
ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಮಕ್ಕಳ ಕಣ್ಮರೆ ಹಿಂದೆ ರಾಜ್ಯದಲ್ಲಿರುವ ನಿರ್ದಿಷ್ಟ ಗುಂಪು ಅಥವಾ ರಾಷ್ಟ್ರವ್ಯಾಪಿ ಜಾಲ ಇದೆಯೇ ಎಂಬುದನ್ನು ಪತ್ತೆಹಚ್ಚಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಕಣ್ಮರೆ ಹಿಂದೆ ಯಾವುದಾದರೂ ಮಾದರಿ ಇದೆಯೇ ಅಥವಾ ಇಷ್ಟಬಂದಂತೆ ಮಾಡಲಾಗಿದೆಯೇ ಎಂಬುದರ ಕುರಿತಂತೆ ಎಲ್ಲಾ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಬೇಕು ಎಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ಉಜ್ಜಲ್ ಭುಯಾನ್ ನೇತೃತ್ವದ ನ್ಯಾಯಪೀಠ ತಿಳಿಸಿದೆ.
‘ಮಕ್ಕಳ ಕಣ್ಮರೆ ಕುರಿತಂತೆ ಕೆಲವು ರಾಜ್ಯಗಳು ಮಾಹಿತಿ ನೀಡಿವೆ. ಡಜನ್‌ಗೂ ಅಧಿಕ ರಾಜ್ಯಗಳು ದತ್ತಾಂಶಗಳನ್ನೇ ನೀಡಿಲ್ಲ. ಎಲ್ಲಾ ದತ್ತಾಂಶಗಳು ಸಿಕ್ಕಿದ ನಂತರವೇ, ವಿಸ್ತೃತ ವಿಶ್ಲೇಷಣೆ ಮಾಡಲು ಸಾಧ್ಯ’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು ನ್ಯಾಯಪೀಠದ ಗಮನಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.