ADVERTISEMENT

ಪಕ್ಷಾಂತರ: ಮುಕುಲ್‌ ರಾಯ್‌ ಅನರ್ಹತೆ ವಿಷಯ ಸ್ಪೀಕರ್‌ ನಿರ್ಧರಿಸುವರು ಎಂದ ಸುಪ್ರೀಂ

ಬಿಜೆಪಿಯಿಂದ ಗೆದ್ದು ಟಿಎಂಸಿಗೆ ಹೋಗಿದ್ದ ಮುಕುಲ್ ರಾಯ್

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 8:38 IST
Last Updated 22 ನವೆಂಬರ್ 2021, 8:38 IST
ಮುಕುಲ್ ರಾಯ್
ಮುಕುಲ್ ರಾಯ್   

ನವದೆಹಲಿ: ಮುಕುಲ್‌ರಾಯ್‌ ಅವರನ್ನು ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಳಿಸುವ ಅರ್ಜಿ ಬಗ್ಗೆಪಶ್ಚಿಮ ಬಂಗಾಳದ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರು ನಿರ್ಧಾರ ಕೈಗೊಳ್ಳುವರು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ವಿಶ್ವಾಸ ವ್ಯಕ್ತಪಡಿಸಿದೆ.

ಬಿಜೆಪಿ ಟಿಕೆಟ್‌ನಿಂದ ಚುನಾಯಿತರಾದ ಬಳಿಕ ಮುಕುಲ್‌ ರಾಯ್‌ ಅವರು ತೃಣಮೂಲ ಕಾಂಗ್ರೆಸ್‌ಗೆ (ಟಿಎಂಸಿ) ಪಕ್ಷಾಂತರ ಮಾಡಿದ್ದರು.

ಕಲ್ಕತ್ತ ಹೈಕೋರ್ಟ್‌ ಆದೇಶದ ವಿರುದ್ಧ ವಿಧಾನಸಭೆ ಸ್ಪೀಕರ್‌ ಮತ್ತು ಪಶ್ಚಿಮಬಂಗಾಳ ವಿಧಾನಸಭೆಯ ಚುನಾವಣಾಧಿಕಾರಿ ಅವರು ಸಲ್ಲಿಸಿರುವ ಎರಡು ಪ್ರತ್ಯೇಕ ಮೇಲ್ಮನವಿಗಳ ಬಗ್ಗೆ ನ್ಯಾಯಮೂರ್ತಿ ಎಲ್‌. ನಾಗೇಶ್ವರ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸಿತು.

ADVERTISEMENT

ರಾಯ್‌ ಅವರನ್ನು ಅನರ್ಹಗೊಳಿಸಿರುವ ಅರ್ಜಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕೆಂದು ಹೈಕೋರ್ಟ್‌ ಸೆಪ್ಟೆಂಬರ್‌ 28ರಂದು ಸ್ಪೀಕರ್‌ಗೆ ಸೂಚಿಸಿತ್ತು.

ಡಿಸೆಂಬರ್‌ 21ರಂದು ಈ ವಿಷಯವು ಸ್ಪೀಕರ್‌ ಅವರ ಮುಂದೆ ಬರಲಿದ್ದು ಅವರು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವರು ಎಂಬ ವಿಶ್ವಾಸ ಇದೆ ಎಂದು ಸುಪ್ರೀಂ ಕೋರ್ಟ್‌ ಹೇಳಿತು. ನಂತರ ವಿಚಾರಣೆಯನ್ನು ಜನವರಿ ತಿಂಗಳಿಗೆ ಮುಂದೂಡಿತು.

ರಾಯ್‌ ಅವರು ಟಿಎಂಸಿಗೆ ಪಕ್ಷಾಂತರ ಮಾಡಿದ್ದು ಅವರನ್ನು ಅನರ್ಹಗೊಳಿಸುವಂತೆ ವಿರೋಧಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಜೂನ್‌ 17ರಂದು ಸ್ಪೀಕರ್‌ ಅವರಿಗೆ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.