ADVERTISEMENT

ರಾತ್ರಿ 9.10ರವರೆಗೂ ಕಲಾಪ ನಡೆಸಿದ ನ್ಯಾಯಪೀಠ

ಪಿಟಿಐ
Published 1 ಅಕ್ಟೋಬರ್ 2022, 3:58 IST
Last Updated 1 ಅಕ್ಟೋಬರ್ 2022, 3:58 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಶುಕ್ರವಾರ,
ನಿಗದಿಗೊಳಿಸಿದ್ದ ಎಲ್ಲ75 ಪ್ರಕರಣಗಳ ವಿಚಾರಣೆ ನಡೆಸಲು ರಾತ್ರಿ 9.10 ಗಂಟೆಯವರೆಗೂ ಕಲಾಪ ನಡೆಸಿತು.

ಅಂದರೆ ನಿಗದಿಗಿಂತ ಹೆಚ್ಚುವರಿಯಾಗಿ ಸುಮಾರು 5 ಗಂಟೆ ಕಲಾಪ ನಡೆಸಿದೆ. ದಸರಾ ರಜೆ ಅವಧಿ ಆರಂಭಕ್ಕೂ ಮೊದಲು ನಿಗದಿತ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸುವುದು ಇದರ ಉದ್ದೇಶವಾಗಿತ್ತು.

ಸುಪ್ರೀಂ ಕೋರ್ಟ್‌ನ್ಯಾಯಮೂರ್ತಿಗಳು ಪ್ರಕರಣಗಳ ವಿಚಾರಣೆಗೆ ಕಲಾಪವನ್ನು ವಾರದ ದಿನಗಳಲ್ಲಿ ಬೆಳಿಗ್ಗೆ 10.30ರಿಂದ ಸಂಜೆ 4ರವರೆಗೂ ನಡೆಸುತ್ತಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.