ADVERTISEMENT

ನೊಯ್ಡಾ ಅವಳಿ ಕಟ್ಟಡ ನೆಲಸಮಕ್ಕೆ ಆ.28ರಂದು ದಿನಾಂಕ ನಿಗದಿ

ಸುಪ್ರೀಂಕೋರ್ಟ್‌ ಸೂಚನೆ

ಪಿಟಿಐ
Published 12 ಆಗಸ್ಟ್ 2022, 15:29 IST
Last Updated 12 ಆಗಸ್ಟ್ 2022, 15:29 IST
ನೊಯ್ಡಾದ ಬಹುಅಂತಸ್ತಿನ ಅವಳಿ ಕಟ್ಟಡಗಳು – ಪಿಟಿಐ  ಸಂಗ್ರಹ ಚಿತ್ರ
ನೊಯ್ಡಾದ ಬಹುಅಂತಸ್ತಿನ ಅವಳಿ ಕಟ್ಟಡಗಳು – ಪಿಟಿಐ  ಸಂಗ್ರಹ ಚಿತ್ರ   

ನವದೆಹಲಿ: ಉತ್ತರ ಪ್ರದೇಶದ ನೊಯ್ಡಾದಲ್ಲಿರುವ ಸೂಪರ್‌ ಟೆಕ್‌ನ 40 ಅಂತಸ್ತಿನ ಅವಳಿ ಕಟ್ಟಡಗಳನ್ನು ನೆಲಸಮ ಮಾಡಲು ಸುಪ್ರೀಂಕೋರ್ಟ್‌ಆಗಸ್ಟ್‌ 28ರಂದು ದಿನಾಂಕ ನಿಗದಿ ಮಾಡಿದೆ. ಹಾಗೆಯೇ ತಾಂತ್ರಿಕ ಅಥವಾ ಹವಾಮಾನ ವೈಪರಿತ್ಯ ಕಾರಣಗಳಿದ್ದಲ್ಲಿ ಸೆಪ್ಟೆಂಬರ್‌ 4ರವರೆಗೂ ಕಾರ್ಯಾಚರಣೆ ನಡೆಸಲು ಸಮಯ ನೀಡಿದೆ.

ಅವಳಿ 40 ಅಂತಸ್ತಿನ ಟವರ್‌ಗಳನ್ನು ನಿಯಮ ಉಲ್ಲಂಘಿಸಿ ಮತ್ತು ಕಾನೂನುಬಾಹಿರವಾಗಿ ಕಟ್ಟಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಆಗಸ್ಟ್‌ 21ರಂದು ಕಟ್ಟಡವನ್ನು ನೆಲಸಮಗೊಳಿಸಲು ಸೂಚಿಸಿತ್ತು. ಆದರೆ ಅವಧಿ ವಿಸ್ತರಣೆ ಕೋರಿ ನೊಯ್ಡಾ ಪ್ರಾಧಿಕಾರ ಮನವಿ ಸಲ್ಲಿಸಿತ್ತು. ಇದನ್ನು ಅಂಗೀಕರಿಸಿರುವ ಸುಪ್ರೀಂ ಕೋರ್ಟ್‌ ಕಟ್ಟಡ ನೆಲಸಮ ದಿನಾಂಕವನ್ನು ಆ.28ಕ್ಕೆ ವಿಸ್ತರಿಸಿದೆ.

ಯಾವುದೇ ತಾಂತ್ರಿಕ ದೋಷಗಳು ಹಾಗೂ ಹವಾಮಾನ ಸಂಬಂಧಿತ ಸಮಸ್ಯೆಗಳು ಎದುರಾದಲ್ಲಿಆಗಸ್ಟ್‌ 29ರಿಂದ ಸೆ.4ರವರೆಗೆ ನೆಲಸಮ ಕಾರ್ಯಾಚರಣೆ ನಡೆಸಬೇಕು ಎಂದು ಸುಪ್ರೀಂ ಗಡುವು ನಿಗದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.