ADVERTISEMENT

ಮಧ್ಯಪ್ರದೇಶದಲ್ಲಿ ಹಿಂಸಾಚಾರ: ವೈದ್ಯಗೆ ಜಾಮೀನು

ಪಿಟಿಐ
Published 14 ಜನವರಿ 2023, 10:40 IST
Last Updated 14 ಜನವರಿ 2023, 10:40 IST
   

ನವದೆಹಲಿ: ಮಧ್ಯಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪ್ರಕರಣದಲ್ಲಿ, ವ್ಯಾಪಂ ಹಗರಣದ ಬಗ್ಗೆ ಧ್ವನಿ ಎತ್ತಿದ್ದ ವೈದ್ಯ ಆನಂದ್‌ ರೈ ಅವರಿಗೆ ಸುಪ್ರೀಂಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿತು.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾ. ಪಿ.ಎಸ್‌ ನರಸಿಂಹ ಅವರನ್ನು ಒಳಗೊಂಡ ನ್ಯಾಯಪೀಠವು ಹಿರಿಯ ವಕೀಲ ಕಪಿಲ್‌ ಸಿಬಲ್‌ ಮತ್ತು ವಿವೇಕ್‌ ತಂಖ ಅವರ ವಾದವನ್ನು ಆಲಿಸಿ, ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.

ಬಳಿಕ, ‘ಜಿಲ್ಲಾಧಿಕಾರಿ ಮೇಲೆ ಆಕ್ರಮಣ ನಡೆಸಿದ ಗುಂಪಿನಲ್ಲಿದ್ದ ಆರೋಪ ಸಂಬಂಧ ಆನಂದ್‌ ಅವರು ಕಳೆದ 60 ದಿನಗಳಿಂದ ಜೈಲಿನಲ್ಲಿದ್ದಾರೆ. ಇನ್ನೆಷ್ಟು ದಿನ ಅವರನ್ನು ಸೆರೆವಾಸದಲ್ಲಿ ಇಡುತ್ತೀರಿ’ ಎಂದು ಮಧ್ಯಪ್ರದೇಶ ಸರ್ಕಾರದ ಪರ ವಕೀಲ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರನ್ನು ಪ್ರಶ್ನಿಸಿತು.

ADVERTISEMENT

ರೈ ಅವರನ್ನು ಕಳೆದ ನ.15ರಂದು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.