ADVERTISEMENT

ಕೇಂದ್ರಕ್ಕೇ ಮನವಿ ಸಲ್ಲಿಸಿ: ಕಾಂಗ್ರೆಸ್ ನಾಯಕನಿಗೆ ಸುಪ್ರೀಂ ಸೂಚನೆ

ಪಿಟಿಐ
Published 5 ಮೇ 2020, 20:00 IST
Last Updated 5 ಮೇ 2020, 20:00 IST
   

ನವದೆಹಲಿ: ಕೋವಿಡ್‌–19 ಹಿನ್ನೆಲೆಯಲ್ಲಿ ಸರ್ವರಿಗೂ ಆಹಾರ ಭದ್ರತೆ ಒದಗಿಸಲು ಕೇಂದ್ರ, ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಹಿರಿಯ ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿತು.

ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೇರವಾಗಿ ಮನವಿ ಸಲ್ಲಿಸಬೇಕು ಎಂದೂ ಕೋರ್ಟ್‌ ಸೂಚಿಸಿತು. ಸಂವಿಧಾನದ ವಿಧಿ 32ರ ಅನ್ವಯ ಸರ್ಕಾರ, ಸಂಬಂಧಿಸಿದ ಆಡಳಿತಗಳಿಗೆ ಮನವಿ ಸಲ್ಲಿಸದೇ ನೇರ ಕೋರ್ಟ್‌ ಮೆಟ್ಟಿಲು ಏರಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿತು.

ಪ್ರಕರಣಗಳ ರದ್ದು: ಅರ್ಜಿ ವಜಾ
ಲಾಕ್‌ಡೌನ್‌ ಅವಧಿಯಲ್ಲಿಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯವೂ ಸೇರಿ ಐಪಿಸಿ ಸೆಕ್ಷನ್‌ ಅನ್ವಯ ದಾಖಲಾಗಿರುವ ವಿವಿಧ ಸಣ್ಣ ಪುಟ್ಟ ಪ್ರಕರಣ ರದ್ದುಪಡಿಸಲು ಕೋರಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ADVERTISEMENT

ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಅಶೋಕ್‌ ಭೂಷಣ್‌, ಅರ್ಜಿದಾರರ ಪರ ಹಾಜರಿದ್ದ ವಕೀಲರಿಗೆ ಸೆಕ್ಷನ್‌ 188 ಜಾರಿಗೊಳಿಸದೇ ಲಾಕ್‌ಡೌನ್‌ ಅನುಷ್ಠಾನ ಹೇಗೆ ಮಾಡುವುದು ಎಂದು ಪ್ರಶ್ನಿಸಿದರು. ಉತ್ತರ ಪ್ರದೇಶದ ಮಾಜಿ ಡಿಜಿಪಿ ವಿಕ್ರಮ್‌ ಸಿಂಗ್ ಅಧ್ಯಕ್ಷರಾಗಿರುವ ಸೆಂಟರ್‌ ಫಾರ್ ಅಕೌಂಟಬಿಲಿಟಿ ಅಂಡ್ ಸಿಸ್ಟಮ್ಯಾಟಿಕ್‌ ಚೇಂಜ್ ಸಂಸ್ಥೆಯು ಅರ್ಜಿ ಸಲ್ಲಿಸಿದ್ದು, ಇದರ ಪರ ವಕೀಲ ಗೋಪಾಲ್ ಶಂಕರನಾರಾಯಣ್‌, ವಕೀಲ ವಿರಾಗ್‌ ಗುಪ್ತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.