ADVERTISEMENT

ಸಿಬಿಐಗೆ ತನಿಖೆ ಹಸ್ತಾಂತರ: ‘ಸುಪ್ರೀಂ’ ನಕಾರ

ಪಾಲ್ಘರ್‌ ಹತ್ಯೆ ಕುರಿತ ಸುದ್ದಿ ಪ್ರಸಾರ: ಅರ್ನಾಬ್‌ ಗೋಸ್ವಾಮಿಗೆ ರಕ್ಷಣೆ

ಪಿಟಿಐ
Published 19 ಮೇ 2020, 19:30 IST
Last Updated 19 ಮೇ 2020, 19:30 IST

ನವದೆಹಲಿ : ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ನಡೆದ ಸಾಧುಗಳ ಹತ್ಯೆಗೆ ಸಂಬಂಧಿಸಿ ರಿಪಬ್ಲಿಕ್‌ ಟಿ.ವಿಯಲ್ಲಿ ಪ್ರಸಾರವಾದ ಸುದ್ದಿ ಕುರಿತಂತೆ ನಡೆಯುತ್ತಿರುವ ಎಲ್ಲಾ ಕ್ರಿಮಿನಲ್‌ ತನಿಖೆಗಳನ್ನು ಸುಪ್ರೀಂಕೋರ್ಟ್‌ ಮಂಗಳವಾರ ವಜಾಗೊಳಿಸಿತು.

ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂಬ ರಿಪಬ್ಲಿಕ್‌ ಟಿ.ವಿ ಸಂಪಾದಕ ಅರ್ನಾಬ್‌ ಗೋಸ್ವಾಮಿ ಮನವಿಯನ್ನುನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಹಾಗೂ ಎಂ.ಆರ್‌.ಶಾ ಅವರಿರುವ ನ್ಯಾಯಪೀಠ ತಿರಸ್ಕರಿಸಿತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ನಡೆಸುತ್ತಿರುವ ತನಿಖೆ ಮುಂದುವರಿಯಲಿದೆ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿತು.

ADVERTISEMENT

ಗೋಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳದಿರಲು, ಅವರಿಗೆ ಮತ್ತೆ ಮೂರು ವಾರಗಳ ರಕ್ಷಣೆ ನೀಡಿತು. ಅವರ ವಿರುದ್ಧ ವಿವಿಧ ನಗರ–ಪಟ್ಟಣಗಳಲ್ಲಿ ದಾಖಲಿಸಿರುವ ಎಫ್‌ಐಆರ್‌ಗಳನ್ನು ವಜಾಗೊಳಿಸಿದ ನ್ಯಾಯಪೀಠ, ‘ಏಪ್ರಿಲ್‌ 21ರಂದು ರಿಪಬ್ಲಿಕ್‌ ಟಿ.ವಿಯಲ್ಲಿ ಪ್ರಸಾರವಾದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹೊಸದಾಗಿ ದೂರು ಅಥವಾ ಎಫ್‌ಐಆರ್‌ ದಾಖಲಿಸಬಾರದು’ ಎಂದೂ ನಿರ್ದೇಶನ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.