ADVERTISEMENT

ಪಿಎಂಎಲ್‌ಎ ಪ್ರಕರಣ ವರ್ಗಾವಣೆ ಅರ್ಜಿ ವಜಾಗೊಳಿಸಿದ ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2023, 14:20 IST
Last Updated 11 ಏಪ್ರಿಲ್ 2023, 14:20 IST
.
.   

ನವದೆಹಲಿ: ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾದ(ಪಿಎಫ್‌ಐ) ವಿದ್ಯಾರ್ಥಿ ಘಟಕದ ನಾಯಕ ಕೆ.ಎ.ರೌಫ್‌ ಷರೀಫ್‌ ಅವರು ತಮ್ಮ ವಿರುದ್ಧ ದಾಖಲಾಗಿರುವ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಪ್ರಕರಣವನ್ನು ಲಖನೌನಿಂದ ಕೇರಳದ ಎರ್ನಾಕುಲಂಗೆ ವರ್ಗಾಯಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ.

‘ವರ್ಗಾವಣೆ ಆದೇಶ ನೀಡಲು ಯಾವುದೇ ಕಾನೂನು ಮಾನ್ಯತೆ ಮತ್ತು ಸಮರ್ಥನೀಯವಾದ ಆಧಾರಗಳು ಇಲ್ಲದಿರುವ ಕಾರಣ ಅರ್ಜಿಯನ್ನು ವಜಾಗೊಳಿಸಲಾಗಿದೆ’ ಎಂದು ವಿ.ರಾಮಸುಬ್ರಮಣಿಯನ್‌ ಮತ್ತು ಪಂಕಜ್‌ ಮಿಥಲ್‌ ಅವರನ್ನು ಒಳಗೊಂಡ ನ್ಯಾಯಪೀಠ ತಿಳಿಸಿದೆ.

‘ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ನೆಲೆಯಲ್ಲಿ ಆರೋಪಿಯ ಪ್ರಕರಣವನ್ನು ಬೇರೆಡೆಗೆ ವರ್ಗಾಯಿಸಬೇಕು ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಒಂದು ವೇಳೆ ಇಂಥ ಸಾಧ್ಯತೆ ಇದ್ದರೂ ಅದು ಆರೋಪಿಯ ನೆರವಿಗೆ ಬರುವ ಕಾರಣ ಆರೋಪಿಯ ಬೇಡಿಕೆಗೆ ಸಮ್ಮತಿ ಸೂಚಿಸಬೇಕಾಗಿಲ್ಲ’ ಎಂದು ನ್ಯಾಯಪೀಠ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.