ADVERTISEMENT

cash row | ಯಶವಂತ ವರ್ಮಾ ವಿರುದ್ಧ ಎಫ್‌ಐಆರ್‌: ‌ಅರ್ಜಿ ವಿಚಾರಣೆಗೆ SC ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 19 ಮೇ 2025, 12:55 IST
Last Updated 19 ಮೇ 2025, 12:55 IST
ಯಶವಂತ ವರ್ಮಾ
ಯಶವಂತ ವರ್ಮಾ   

ನವದೆಹಲಿ: ಅಲಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಮನೆಯಲ್ಲಿ ನೋಟಿನ ಕಂತೆಗಳು ಪತ್ತೆಯಾದ ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಸೋಮವಾರ ಒಪ್ಪಿಗೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್‌ ಮಸೀಹ್‌ ಅವರನ್ನು ಒಳಗೊಂಡ ನ್ಯಾಯಪೀಠವು, ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಇದಕ್ಕೂ ಮುನ್ನ ನ್ಯಾಯಪೀಠವು, ‘ಅರ್ಜಿಯಲ್ಲಿನ ದೋಷಗಳನ್ನು ಸರಿಪಡಿಸಿದ್ದರೆ ಮಂಗಳವಾರ ವಿಚಾರಣೆ ನಡೆಸಬಹುದೇ’ ಎಂದು ವಕೀಲ ಮತ್ತು ಅರ್ಜಿದಾರ ಮ್ಯಾಥ್ಯೂ ನೆದುಂಪಾರಾ ಅವರನ್ನು ಕೇಳಿತು.

ADVERTISEMENT

ಮಂಗಳವಾರ ತಾವು ಲಭ್ಯವಿರದ ಕಾರಣ ಬುಧವಾರ ವಿಚಾರಣೆ ನಡೆಸುವಂತೆ ಅವರು ಕೇಳಿಕೊಂಡರು. ಬಳಿಕ ಕೋರ್ಟ್‌ ಬುಧವಾರ ವಿಚಾರಣೆಗೆ ಪಟ್ಟಿ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.