
ಪ್ರಜಾವಾಣಿ ವಾರ್ತೆ
ಹೈದರಾಬಾದ್ : ಮುಖ್ಯೋಪಾಧ್ಯಾಯರು ಆದೇಶಿಸಿದರು ಎಂದು 7ನೇ ತರಗತಿಯ ಬಾಲಕನನ್ನು ಅದೇ ಶಾಲೆಯ ಹಿರಿಯ ವಿದ್ಯಾರ್ಥಿಗಳು ಮನಬಂದಂತೆ ಥಳಿಸಿರುವ ಘಟನೆ ತೆಲಂಗಾಣದ ಹೈದರಾಬಾದ್‌ನಲ್ಲಿನ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಶಾಲೆಯ ವಾಹನ ನಿಲುಗಡೆ ಸ್ಥಳದಲ್ಲಿ ಇರುತ್ತಿದ್ದ ಸೈಕಲ್‌ಗಳ ಚಕ್ರದಿಂದ ಗಾಳಿ ತೆಗೆದು, ಪಂಕ್ಚರ್ ಮಾಡುತ್ತಿದ್ದಾನೆ ಎಂದು 7ನೇ ತರಗತಿ ಬಾಲಕನ ಮೇಲೆ ಮುಖ್ಯೋಪಾಧ್ಯಾಯರು ಅನುಮಾನಗೊಂಡಿದ್ದರು. ಹೀಗಾಗಿ ಆತನನ್ನು ಥಳಿಸಲು ಹಿರಿಯ ವಿದ್ಯಾರ್ಥಿಗಳಿಗೆ ಸೋಮವಾರ ನಿರ್ದೇಶಿಸಿದರು.
ಬಾಲಕನು ತೀವ್ರವಾಗಿ ಗಾಯಗೊಂಡಿದ್ದಾನೆ. ಆತನ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.