ADVERTISEMENT

ಪಂಜಾಬ್‌ನಲ್ಲಿ ಎಲ್ಲಾ ತರಗತಿಗಳಿಗೆ ಶಾಲೆ ಪುನರಾರಂಭ

ಪಿಟಿಐ
Published 2 ಆಗಸ್ಟ್ 2021, 9:49 IST
Last Updated 2 ಆಗಸ್ಟ್ 2021, 9:49 IST
ಪಟಿಯಾಲದಲ್ಲಿ ಶಾಲೆಯತ್ತ ಹೊರಟಿರುವ ಮಕ್ಕಳು: ಪಿಟಿಐ ಚಿತ್ರ
ಪಟಿಯಾಲದಲ್ಲಿ ಶಾಲೆಯತ್ತ ಹೊರಟಿರುವ ಮಕ್ಕಳು: ಪಿಟಿಐ ಚಿತ್ರ    

ಚಂಡೀಗಡ: ಕೋವಿಡ್‌ ಹರಡುವಿಕೆ ಕಾರಣದಿಂದ ಹಲವು ತಿಂಗಳುಗಳ ಕಾಲ ಮುಚ್ಚಲಾಗಿದ್ದ ಶಾಲೆಗಳನ್ನು ಪಂಜಾಬ್‌ನಲ್ಲಿ ಇಂದಿನಿಂದ ಪುನರಾರಂಭಿಸಲಾಗಿದೆ. ಕೊರೊನಾ ಮೂರನೇ ಅಲೆಯ ಆತಂಕದ ನಡುವೆ ಎಲ್ಲಾ ತರಗತಿಗಳನ್ನು ಆರಂಭಿಸಲಾಗಿದೆ.

ಹೆಚ್ಚಿನ ಖಾಸಗಿ ಶಾಲೆಗಳಲ್ಲಿ ಮಕ್ಕಳ ಹಾಜರಿ ಪ್ರಮಾಣ ಕಡಿಮೆ ಇದ್ದು, ಗ್ರಾಮೀಣ ಪ್ರದೇಶಗಳ ಹಾಜರಾತಿ ಹೆಚ್ಚಿರುವ ಬಗ್ಗೆ ವರದಿಯಾಗಿದೆ.

ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ನಿರ್ಬಂಧಗಳನ್ನು ಇನ್ನಷ್ಟು ಸಡಿಲಗೊಳಿಸಿದ್ದ ಪಂಜಾಬ್ ಸರ್ಕಾರವು ಆಗಸ್ಟ್ 2 ರಿಂದ ಎಲ್ಲಾ ತರಗತಿಗಳಿಗೆ ಶಾಲೆಗಳನ್ನು ಪುನಃ ತೆರೆಯಲು ಶನಿವಾರ ಅನುಮತಿ ನೀಡಿತ್ತು.

ADVERTISEMENT

ಕೊರೊನಾ ವೈರಸ್ ಸಂಬಂಧಿತಎಲ್ಲಾ ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದ್ದು, ಪೋಷಕರು ತಮ್ಮ ಮಕ್ಕಳಿಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಶಾಲೆಗಳಿಗೆ ಹಾಜರಾಗಲು ಲಿಖಿತ ಒಪ್ಪಿಗೆಯನ್ನು ನೀಡಬೇಕಾಗುತ್ತದೆ.

ಸೋಮವಾರ ರಾಜ್ಯಾದ್ಯಂತ ಎಲ್ಲಾ ತರಗತಿಗಳಿಗೆ ಶಾಲೆಗಳನ್ನು ಪುನರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ 2 ರಿಂದ ಎಲ್ಲಾ ತರಗತಿಗಳಿಗೆ ಶಾಲೆಗಳನ್ನು ಮತ್ತೆ ತೆರೆಯಲು ನಿರ್ಧರಿಸುವುದಕ್ಕೂ ಮೊದಲು, ಸರ್ಕಾರವು ಜುಲೈ 26 ರಿಂದಲೇ 10 ರಿಂದ 12 ನೇ ತರಗತಿವರೆಗಿನ ಶಾಲೆಗಳನ್ನು ತೆರೆಯಲು ಅನುಮತಿ ನೀಡಿತ್ತು.

ಶಾಲೆಗೆ ಗೈರಾಗುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ಮುಂದುವರಿಯುತ್ತವೆ.

ಲೂಧಿಯಾನ, ಅಮೃತಸರ, ಜಲಂಧರ್, ಫಿರೋಜ್‌ಪುರ, ರೂಪನಗರ, ಮೊಹಾಲಿ ಮತ್ತು ಪಟಿಯಾಲಾ ಸೇರಿದಂತೆ ರಾಜ್ಯದ ಹಲವೆಡೆ ಸುದೀರ್ಘ ವಿರಾಮದ ಬಳಿಕ ಶಾಲೆಗೆ ಮರಳಿದ ಮಕ್ಕಳ ಮೊಗದಲ್ಲಿ ಸಂಭ್ರಮ ಮನೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.