ADVERTISEMENT

ಕೊರೊನಾ ಸೋಂಕು ತಡೆಗೆ ಲಭ್ಯವಿರುವ ಔಷಧಗಳ ಬಳಕೆ ಸಾಧ್ಯತೆಗಳ ಪರಿಶೀಲನೆ

ಪಿಟಿಐ
Published 15 ಆಗಸ್ಟ್ 2020, 14:21 IST
Last Updated 15 ಆಗಸ್ಟ್ 2020, 14:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಶ್ರವಣ ದೋಷಸೇರಿದಂತೆ ವಿವಿಧ ಸಮಸ್ಯೆಗಳ ಚಿಕಿತ್ಸೆಗೆ ಬಳಸುವ ಔಷಧಗಳೂ ಸೇರಿ ಹಾಲಿ ಲಭ್ಯವಿರುವ ಔಷಧಗಳನ್ನುಕೊರೊನಾ ಸೋಂಕು ತಡೆ ಚಿಕಿತ್ಸೆಗೆ ಬಳಸುವ ಸಾಧ್ಯತೆಗಳನ್ನು ವಿಜ್ಞಾನಿಗಳು ಪರಿಶೀಲಿಸುತ್ತಿದ್ದಾರೆ.

ಕೊರೊನಾ ವೈರಾಣು ಸಕ್ರಿಯವಾಗಿರುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಅದರ ಧಾತುವನ್ನು (ಎಂ.ಪಿ.ಆರ್.ಒ) ವಿಶ್ಲೇಷಿಸಿರುವ ಅಧ್ಯಯನ ವರದಿಯನ್ನು ಸೈನ್ಸ್ ಅಡ್ವಾನ್ಸ್ ನಿಯಕಾಲಿಕೆಯ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.

ಶಿಕಾಗೊ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ, ಎಂ.ಪಿ.ಆರ್.ಒ ವೈರಾಣುವಿಗೆ ಅಗತ್ಯ ಸತ್ವ ಪಡೆಯಲು, ದ್ವಿಗುಣಗೊಳ್ಳಲು ಸಹಕಾರಿ. ಈ ಶಕ್ತಿಯನ್ನು ಕುಂದಿಸುವ ಕುರಿತಂತೆ ಹಾಲಿ ಲಭ್ಯವಿರುವ ವಿವಿಧ ಔಷಧಗಳನ್ನು ಬಳಸುವ ಕುರಿತು ಪ್ರಯೋಗ ನಡೆಯುತ್ತಿದೆ.

ADVERTISEMENT

ಪ್ರಾಯೋಗಿಕ ಪರೀಕ್ಷೆಯ ಮಾಹಿತಿಗಳ ಸಮಗ್ರ ಲೆಕ್ಕಾಚಾರ, ವಿಶ್ಲೇಷಣೆ ಆಗಬೇಕು. ಆಮೂಲಾಗ್ರ ವಿಶ್ಲೇಷಣೆಯಿಂದ ಸರಳ ಫಲಿತಾಂಶ ಲಭ್ಯವಾಗಬಹುದು ಎನ್ನುತ್ತಾರೆ ಸಹ ಲೇಖಕ ಶಿಕಾಗೊ ಯೂನಿವರ್ಸಿಟಿಯ ಜುಆನ್ ಡೆ ಪಾಬ್ಲೊ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.