ADVERTISEMENT

370ನೇ ವಿಧಿ ರದ್ದತಿ ಅಥವಾ ಅದರ ಪರಿಣಾಮ ಬಗ್ಗೆ ಸಂದೇಹ ಇಲ್ಲ: ಅಮಿತ್ ಶಾ  

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 12:48 IST
Last Updated 11 ಆಗಸ್ಟ್ 2019, 12:48 IST
   

ಚೆನ್ನೈ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದರಿಂದ ಅಲ್ಲಿ ಭಯೋತ್ಪಾದನೆ ಕಡಿಮೆಯಾಗಿ ಅಭಿವೃದ್ಧಿಯುಂಟಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಗುಜರಾತಿನ ಶಾಸಕನಾಗಿದ್ದಾಗಲೇ ನಾನು ಕಾಶ್ಮೀರಕ್ಕೆ ವಿಶೇಷಾಧಿಕಾರ ಕೊಟ್ಟ ಸಂವಿಧಾನದ ವಿಧಿ ರದ್ದುಗೊಳಿಸುವುದರಪರವಾಗಿದ್ದೆ. ಗೃಹ ಸಚಿವನಾದ ನಂತರ ಈ ವಿಧಿಯನ್ನು ರದ್ದು ಮಾಡುವ ಬಗ್ಗೆ ಅಥವಾಅದರ ಪರಿಣಾಮ ಬಗ್ಗೆ ನನಗೆ ಯಾವುದೇ ಗೊಂದಲಗಳಿರಲಿಲ್ಲ ಎಂದಿದ್ದಾರೆ ಅಮಿತ್ ಶಾ.

ಚೆನ್ನೈನಲ್ಲಿ ಉಪಾಧ್ಯಕ್ಷ ವೆಂಕಯ್ಯನಾಯ್ಡು ಅವರು ಕಚೇರಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅಮಿತ್ ಶಾ ಈ ಮಾತುಗಳನ್ನಾಡಿದ್ದಾರೆ.

ADVERTISEMENT

370ನೇ ವಿಧಿ ಜಮ್ಮ ಕಾಶ್ಮೀರಕ್ಕಾಗಲೀ ದೇಶಕ್ಕಾಗಲೀ ಒಳಿತುಂಟು ಮಾಡಲಿಲ್ಲ.ಅದು ಕಾಶ್ಮೀರದ ಅಭಿವೃದ್ಧಿಗೆ ತಡೆಯಾಗಿತ್ತು
ಸಂವಿಧಾನದಿಂದ ಅದನ್ನು ತೆಗೆದುಹಾಕಬೇಕೆಂದು ನಾನು ದೃಢ ನಿಶ್ಚಯ ಮಾಡಿದ್ದೆ. ಇದೀಗ ಅದನ್ನು ರದ್ದು ಮಾಡಿದ್ದರಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ನಿಂತು ಅಭಿವೃದ್ಧಿಯುಂಟಾಗುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.