ADVERTISEMENT

ತಮಿಳುನಾಡಿನ ಪುರಾತನ ಕಾಲದ ವಿಗ್ರಹ ಅಮೆರಿಕದಲ್ಲಿ ಪತ್ತೆ

ಪಿಟಿಐ
Published 20 ಆಗಸ್ಟ್ 2022, 13:34 IST
Last Updated 20 ಆಗಸ್ಟ್ 2022, 13:34 IST

ಚೆನ್ನೈ: ತಮಿಳುನಾಡಿನ ತಾಂಜಾವೂರು ಜಿಲ್ಲೆಯ ನದನಪುರೇಶ್ವರರ್‌ ಶಿವನ್‌ ದೇಗುಲದಿಂದ ನಾಪತ್ತೆಯಾಗಿದ್ದ 13ನೇ ಶತಮಾನದ ಚೋಳರ ಕಾಲದ ನೃತ್ಯ ಮಾಡುತ್ತಿರುವ ಸಂಬಂದರ್‌ ಅವರ ಕಂಚಿನ ಪ್ರತಿಮೆಯು ಅಮೆರಿಕದ ಕ್ರಿಸ್ಟೀಸ್‌ ಆಕ್ಷನ್‌ ಹೌಸ್‌ನಲ್ಲಿ ಪತ್ತೆಯಾಗಿದೆ ಎಂದು ರಾಜ್ಯದ ‍ಪುರಾತನ ಕಾಲದ ಮೂರ್ತಿಗಳನ್ನು ಪತ್ತೆ ಮಾಡುವ ಸಿಐಡಿ ದಳ ಶನಿವಾರ ತಿಳಿಸಿದೆ.

ಅಲ್ಲದೆ ವಿಗ್ರಹವನ್ನು ವಾಪಸ್‌ ನೀಡುವಂತೆ ಕ್ರಿಸ್ಟೀಸ್‌ ಆಕ್ಷನ್‌ ಹೌಸ್‌ಗೆ ಪತ್ರ ಬರೆದಿದೆ.1971 ಮೇನಲ್ಲಿ ಶಿವನ್‌ ದೇಗುಲದ ಸಂಬಂದರ್‌, ಕೃಷ್ಣ ಕಾಳಿಂಗ ನರ್ತನಾ, ಅಯ್ಯನಾರ್‌, ಅಗಸ್ತ್ಯ ಮತ್ತು ಪಾರ್ವತಿ ವಿಗ್ರಹಗಳು ಕಾಣೆಯಾಗಿದ್ದವು. ಸಿಐಡಿಯು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿತ್ತು. ಇತ್ತೀಚೆಗೆ ದೇಗುಲದ ಪಾರ್ವತಿ ವಿಗ್ರಹವೂ ಅಮೆರಿಕದಲ್ಲಿ ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT