ADVERTISEMENT

ಕರಾವಳಿಯ ಕಾವಲಿಗೆ ‘ವಜ್ರಾ’ಯುಧ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 19:45 IST
Last Updated 27 ಫೆಬ್ರುವರಿ 2020, 19:45 IST
‘ವಜ್ರ’ ಗಸ್ತು ನೌಕೆ
‘ವಜ್ರ’ ಗಸ್ತು ನೌಕೆ   

ಚೆನ್ನೈ : ಕಡಲಾಚೆಗೆ ಗಸ್ತುತಿರುಗಿ ರಕ್ಷಣೆ ಒದಗಿಸುವ ‘ವಜ್ರ’ ನೌಕೆಗೆಕೇಂದ್ರ ಬಂದರು ಸಚಿವ ಮನ್ಸುಖ್ ಮಾಂಡವೀಯ ಅವರುಗುರುವಾರ ಇಲ್ಲಿ ಚಾಲನೆ ನೀಡಿದರು.

ಮೇಕ್ ಇನ್ ಇಂಡಿಯಾ ಅಭಿಯಾನದಡಿ ಲಾರ್ಸನ್ ಅಂಡ್ ಟುಬ್ರೊ ಸಂಸ್ಥೆಯು ನೌಕೆಯನ್ನು ನಿರ್ಮಿಸಿದೆ. ಇದು ಹಗಲು ರಾತ್ರಿಯೆನ್ನದೆ ಕರಾವಳಿಯಲ್ಲಿ ಕಾವಲು ಕಾಯಲಿದೆ ಎಂದು ಮಾಂಡವೀಯ ಅವರು ಹೇಳಿದ್ದಾರೆ.

‘ರಕ್ಷಣೆಗೆ ಸಂಬಂಧಿಸಿದಂತೆ ಯಾವುದೇ ಅವಘಡಗಳಿಗೆ ಆಸ್ಪದ ನೀಡದಂತೆ ಭದ್ರತೆ ನಿಯೋಜಿಸುತ್ತಿರುವ ಆರನೇ ನೌಕೆ ಇದಾಗಿದೆ. ಅತ್ಯಾಧುನಿಕ ಸೌಕರ್ಯದ ಸಂವಹನ ವ್ಯವಸ್ಥೆಯನ್ನು ನೌಕೆಯಲ್ಲಿ ಅಳವಡಿಸಲಾಗಿದೆ’ ಎಂದು ಸಚಿವರು ಹೇಳಿದ್ದಾರೆ.

ADVERTISEMENT

ಕಡಲ ಗಸ್ತು ಉದ್ದೇಶದ ಸ್ವದೇಶಿ ನಿರ್ಮಿತ ಏಳು ನೌಕೆಗಳಲ್ಲಿ ವಜ್ರ ಆರನೆಯದ್ದು. ಯಂತ್ರಗಳು, ಉಪಕರಣ, ಪಥದರ್ಶಕ ವ್ಯವಸ್ಥೆ ಎಲ್ಲವೂ ಸ್ವದೇಶಿ ನಿರ್ಮಿತ. ಪರೀಕ್ಷಾರ್ಥ ಚಾಲನೆ ಬಳಿಕ ಇದೇ ವರ್ಷದ ಅಕ್ಟೋಬರ್‌ನಲ್ಲಿ ನೌಕೆಯು ಬಳಕೆಗೆ ಲಭ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.