ADVERTISEMENT

ಜಮ್ಮು & ಕಾಶ್ಮೀರ: ಸುಧಾರಿತ ಸ್ಫೋಟಕ ನಿಷ್ಕ್ರಿಯಗೊಳಿಸಿದ ಭದ್ರತಾ ಪಡೆ

ಪಿಟಿಐ
Published 18 ಫೆಬ್ರುವರಿ 2025, 11:31 IST
Last Updated 18 ಫೆಬ್ರುವರಿ 2025, 11:31 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಇರಿಸಲಾಗಿದ್ದ ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಪತ್ತೆ ಮಾಡಿ ನಿಷ್ಕ್ರಿಯಗೊಳಿಸುವ ಮೂಲಕ ಸಂಭವನೀಯ ಭಾರಿ ಅನಾಹುತವನ್ನು ಭದ್ರತಾ ಪಡೆಗಳು ತಪ್ಪಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೋಪಿಯಾನ್‌ನ ಜೈನಾಪೊರಾ ಪ್ರದೇಶದ ಚಿತ್ರಗಂನ ಲಿಂಕ್‌ ರಸ್ತೆಯಲ್ಲಿ ಶೋಧ ನಡೆಸಿದ ಪೊಲೀಸರ ಜಂಟಿ ಕಾರ್ಯಪಡೆ ಮತ್ತು ಭದ್ರತಾ ಪಡೆ, ಭಯೋತ್ಪಾದಕರು ಪ್ರೆಶರ್‌ ಕುಕ್ಕರ್‌ನಲ್ಲಿ ಹುದುಗಿಸಿದ್ದ ಐಇಡಿಯನ್ನು ಪತ್ತೆ ಮಾಡಿತು. ಸ್ಥಳಕ್ಕೆ ಧಾವಿಸಿದ ಸ್ಫೋಟಕ ನಿಷ್ಕ್ರಿಯ ದಳವು ಯಾವುದೇ ಹಾನಿಯಾಗದಂತೆ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಿತು ಎಂದು ಅವರು ಹೇಳಿದ್ದಾರೆ.

ADVERTISEMENT

ಪುಲ್ವಾಮಾದ ಟ್ರಾಲ್ ಪ್ರದೇಶದ ಪಿಂಗ್ಲಿಷ್‌ನಲ್ಲಿ ರಸ್ತೆ ಬದಿಯಲ್ಲಿ ಪ್ರೆಶರ್ ಕುಕ್ಕರ್‌ನಲ್ಲಿ ಇರಿಸಲಾಗಿದ್ದ ಐಇಡಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಸ್ಫೋಟಕ ನಿಷ್ಕ್ರಿಯ ದಳವು ಸ್ಥಳಕ್ಕೆ ತಲುಪಿ ಐಇಡಿಯನ್ನು ನಿಷ್ಕ್ರಿಯಗೊಳಿಸಿತು. ಐಇಡಿಗಳನ್ನು ಸಮಯೋಚಿತವಾಗಿ ಪತ್ತೆಹಚ್ಚಿದ್ದರಿಂದ ಆ ಪ್ರದೇಶಗಳಲ್ಲಿನ ನಾಗರಿಕರು ಅಥವಾ ಭದ್ರತಾ ಪಡೆಗಳಿಗೆ ಹಾನಿಯಾಗುವುದನ್ನು ತಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.