ADVERTISEMENT

ಅನ್ನದಾತರ ವಿರುದ್ಧ ಎರಡು ರೈತ ವಿರೋಧಿ ಪಕ್ಷಗಳು ಕೈಜೋಡಿಸಿವೆ: ಖರ್ಗೆ ಆರೋಪ

ಪಿಟಿಐ
Published 20 ಮಾರ್ಚ್ 2025, 11:25 IST
Last Updated 20 ಮಾರ್ಚ್ 2025, 11:25 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಅನ್ನದಾತರ ವಿರುದ್ಧ ಎರಡು ರೈತ ವಿರೋಧಿ ಪಕ್ಷಗಳು ಕೈಜೋಡಿಸಿವೆ. ದೇಶದ 62 ಕೋಟಿ ರೈತರು, ಇಂತಹ ರೈತ ವಿರೋಧಿ ಪಕ್ಷಗಳನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಶಂಭು ಹಾಗೂ ಖನೌರಿಯ ಪ್ರತಿಭಟನಾ ಸ್ಥಳಗಳಿಂದ ರೈತರನ್ನು ಬಲವಂತವಾಗಿ ಸ್ಥಳಾಂತರಿಸುವ ಕ್ರಮವನ್ನು ಖಂಡಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಅನ್ನದಾತರ ವಿರುದ್ಧ ಎರಡು ರೈತ ವಿರೋಧಿ ಪಕ್ಷಗಳು ಕೈಜೋಡಿಸಿವೆ ಹಾಗೂ ಅವರಿಗೆ ದ್ರೋಹ ಬಗೆದಿವೆ’ ಎಂದಿದ್ದಾರೆ. 

‘ಅಧಿಕಾರದ ದುರಂಹಕಾರದ ನಶೆಯಲ್ಲಿ ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷ (ಎಎಪಿ) ರೈತರ ಮೇಲೆ ದಾಳಿ ನಡೆಸಿವೆ. ದೇಶದ 62 ಕೋಟಿ ರೈತರು ಈ ಎರಡು ಪಕ್ಷಗಳನ್ನು ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಟೀಕಿಸಿದ್ದಾರೆ. 

ADVERTISEMENT

‘ಮೊದಲು ಪಂಜಾಬ್ ಸರ್ಕಾರವು ರೈತರನ್ನು ಮಾತುಕತೆಗೆ ಆಹ್ವಾನಿಸಿತು. ಬಳಿಕ ಪ್ರತಿಭಟನಾ ಸ್ಥಳದಿಂದ ಬಲವಂತವಾಗಿ ತೆರವುಗೊಳಿಸಿತು’ ಎಂದು ಅವರು ಆರೋಪಿಸಿದ್ದಾರೆ. ರೈತ ನಾಯಕರಾದ ಸರ್ವಾನ್ ಸಿಂಗ್ ಪಂಧೇರ್ ಮತ್ತು ಜಗಜಿತ್ ಸಿಂಗ್ ಡಲ್ಲೇವಾಲ್ ಬಂಧನವನ್ನು ಖರ್ಗೆ ಖಂಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.