ADVERTISEMENT

ಬೆಕ್ಕನ್ನು ಹುಲಿಮರಿ ಎಂದು ಮಾರಾಟ ಮಾಡಲು ಯತ್ನಿಸಿದವನ 'ಬಣ್ಣ" ಕಳಚಿದ ಪೊಲೀಸ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಸೆಪ್ಟೆಂಬರ್ 2022, 9:15 IST
Last Updated 12 ಸೆಪ್ಟೆಂಬರ್ 2022, 9:15 IST
ಬಂಧಿತ ಪ್ರತಿಭನ್
ಬಂಧಿತ ಪ್ರತಿಭನ್   

ಇಡುಕ್ಕಿ: ಮೋಸ ಮಾಡಿ ದುಡ್ಡು ಮಾಡಲು ಕೆಲವರು ಎಂತಹಉಪಾಯಗಳನ್ನು ಮಾಡುತ್ತಾರೆ ಎನ್ನುವುದಕ್ಕೆ ಇಲ್ಲೊಂದು ತಾಜಾ ನಿದರ್ಶನ ಸಿಕ್ಕಿದೆ.

ಹೌದು, ವ್ಯಕ್ತಿಯೊಬ್ಬ ಬೆಕ್ಕನ್ನು ಹುಲಿ ಮರಿ ಎಂದು ಅದನ್ನು ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ತಮಿಳುನಾಡಿನ ತಿರುವನ್ನಮಲೈ ಮೂಲದ ಪ್ರತಿಭನ್ (24) ಎನ್ನುವನನ್ನು ಚೆನ್ನೈ ಪೊಲೀಸರ ಸಹಕಾರದೊಂದಿಗೆ ಕೇರಳ ಅರಣ್ಯ ಪೊಲೀಸ್ ಬಂಧಿಸಿದ್ದಾರೆ ಎಂದು ಡಿಜಿವರ್ಲ್ಡ್‌ ಡಾಟ್‌ಕಾಮ್ ವರದಿ ಮಾಡಿದೆ.

ADVERTISEMENT

ಪ್ರತಿಭನ್ ಕೆಲ ದಿನಗಳ ಹಿಂದೆ ತನ್ನ ಬಳಿ ಹುಲಿ ಮರಿಯಿದೆ, ಅದನ್ನು ‘₹ 25 ಲಕ್ಷ ರೂಪಾಯಿ ಕೊಟ್ಟರೆ ನಿಮಗೇ ಕೊಡುತ್ತೇನೆ ಎಂದು ವಾಟ್ಸ್‌ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದ. ಈ ಸಂದೇಶ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ಅವರು ಪ್ರತಿಭನ್‌ಗಾಗಿ ಹುಡುಕಾಟ ನಡೆಸಿದ್ದರು.

ತಿರುವನ್ನಮಲೆಯ ಮನೆಯಲ್ಲಿ ಪ್ರತಿಭನ್ ಸಿಗದಿದ್ದಾಗ ಸ್ಥಳೀಯ ಪೊಲೀಸರ ನೆರವಿನಿಂದ ಊರಿನ ಹೊರವಲಯದಲ್ಲಿ ಆತನನ್ನು ಬಂಧಿಸಿದಾಗ ನಿಜಕ್ಕೂ ಹೌಹಾರಿದ್ದು ಪೊಲೀಸ್ ಅಧಿಕಾರಿಗಳು!

ಏಕೆಂದರೆ ಪ್ರತಿಭನ್. ಬೆಕ್ಕಿಗೆ ಹುಲಿ ಮರಿ ರೀತಿ ಬಣ್ಣ ಬಳಿದು ಅದಕ್ಕೆ ಆಹಾರ ತಿನ್ನಿಸುವ ಫೋಟೊಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದ. ಬೆಕ್ಕಿನ ಸಮೇತ ಈತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.