ADVERTISEMENT

Ganesh Chaturthi: ರೈಲು ನಿಲ್ದಾಣಗಳಲ್ಲಿ ‘ಗಣೇಶ ಪಂಚರತ್ನಂ’ಗೆ ಮನವಿ

ಪಿಟಿಐ
Published 31 ಆಗಸ್ಟ್ 2024, 13:48 IST
Last Updated 31 ಆಗಸ್ಟ್ 2024, 13:48 IST
   

ಠಾಣೆ: ಠಾಣೆಯ ಶಿವಸೇನಾ ಮುಖ್ಯಸ್ಥ ನರೇಶ್ ಮಹಾಸ್ಕೆ ಅವರು ಗಣೇಶ ಹಬ್ಬದಂದು ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ‘ಗಣೇಶ ಪಂಚರತ್ನಂ’ ಪ್ರಾರ್ಥನೆಯನ್ನು ಹಾಕುವಂತೆ ಭಾರತೀಯ ರೈಲ್ವೆ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.

ಸೆಪ್ಟೆಂಬರ್‌ 7ರಿಂದ ಆರಂಭವಾಗಲಿರುವ ಉತ್ಸವಕ್ಕೆ ಮುಂಚಿತವಾಗಿಯೇ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ. 8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ರಚಿಸಿದ ಪ್ರಾರ್ಥನೆಯನ್ನು ರೈಲು ನಿಲ್ದಾಣಗಳಲ್ಲಿ ಪ್ರಸಾರ ಮಾಡುವಂತೆ ಮಹಾಸ್ಕೆ ಕೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT