ADVERTISEMENT

ರಾಜಸ್ಥಾನದ ಶೇ 90 ಜನರಲ್ಲಿ ಪ್ರತಿಕಾಯ ಶಕ್ತಿ ವೃದ್ಧಿಸಿದೆ: ಸಿಎಂ ಅಶೋಕ್ ಗೆಹಲೋತ್‌

ಪಿಟಿಐ
Published 14 ಜನವರಿ 2022, 1:42 IST
Last Updated 14 ಜನವರಿ 2022, 1:42 IST
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌   

ಜೈಪುರ: ರಾಜಸ್ಥಾನದ ಶೇ 90ರಷ್ಟು ಜನರಲ್ಲಿರೋಗ ಪ್ರತಿರೋಧಕ ಶಕ್ತಿ ವೃದ್ಧಿಸಿರುವುದು ಸೆರೊ ಸಮೀಕ್ಷೆ ವೇಳೆ ತಿಳಿದುಬಂದಿದೆ ಎಂದು ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಹೇಳಿದ್ದಾರೆ.

ರಾಜ್ಯದಲ್ಲಿಸೋಂಕು ಸಮುದಾಯಕ್ಕೆ ಹರಡಿದ ಸಂದರ್ಭದಲ್ಲಿ ʼರೋಗ ಪ್ರತಿರೋಧಕ ಶಕ್ತಿʼ ಹೆಚ್ಚಾಗಿರುವುದನ್ನು ಸಮೀಕ್ಷೆ ಸೂಚಿಸುತ್ತದೆ ಎಂದೂ ತಿಳಿಸಿದ್ದಾರೆ.

ಈ ಸಂಬಂಧಹೇಳಿಕೆ ಬಿಡುಗಡೆ ಮಾಡಿರುವ ಗೆಹಲೋತ್‌, ʼರಾಜ್ಯದ ಶೇ 90 ಜನರಲ್ಲಿ ಪ್ರತಿಕಾಯ ಶಕ್ತಿವೃದ್ಧಿಸಿರುವುದು ಸೆರೊ ಸಮೀಕ್ಷೆಯಿಂದ ತಿಳಿದುಬಂದಿದೆ. ಈ ಮಾಹಿತಿಯನ್ನು ತೃಪ್ತಿಯಿಂದ ಹಂಚಿಕೊಳ್ಳುತ್ತಿದ್ದೇನೆʼ ಎಂದಿದ್ದಾರೆ.

ADVERTISEMENT

ರೋಗ ಪ್ರತಿರೋಧಕ ಶಕ್ತಿ ಮತ್ತಷ್ಟು ಪ್ರಬಲವಾಗಲು, ಲಸಿಕೆ ಪಡೆದುಕೊಳ್ಳುವುದುಈಗಲೂ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಇದೇ ವೇಳೆ, ಎಲ್ಲ ವಯೋಮಾನದವರಿಗೂ ಮುನ್ನೆಚ್ಚರಿಕೆ ಅಥವಾ ಬೂಸ್ಟರ್‌ ಡೋಸ್ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಕೋವಿಡ್‌ ಪರಿಸ್ಥಿತಿ ಪರಿಶೀಲನಾ ಸಭೆ ವೇಳೆ ಸಲಹೆ ನೀಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಕೇಂದ್ರಕ್ಕೆ ಸಲಹೆ ನೀಡುತ್ತಿದ್ದೇನೆ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.