ADVERTISEMENT

‘ಸ್ಪುಟ್ನಿಕ್ ವಿ’ ಲಸಿಕೆ ತಯಾರಿಕೆಗೆ ಅನುಮತಿ ಕೋರಿ ಸೀರಂನಿಂದ ಅರ್ಜಿ

ಪಿಟಿಐ
Published 3 ಜೂನ್ 2021, 7:35 IST
Last Updated 3 ಜೂನ್ 2021, 7:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್‌–19 ಲಸಿಕೆ ‘ಸ್ಪುಟ್ನಿಕ್ ವಿ’ ತಯಾರಿಸಲು ಅನುಮತಿ ಕೋರಿ ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ (ಎಸ್‌ಐಐ) ಗುರುವಾರ ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯಕ್ಕೆ (ಡಿಸಿಜಿಐ) ಅರ್ಜಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

ಲಸಿಕೆಯ ವಿಶ್ಲೇಷಣೆ ಮತ್ತು ಪರೀಕ್ಷೆಗೆ ಅನುಮೋದನೆ ನೀಡುವಂತೆಯೂ ಕಂಪನಿ ಕೋರಿಕೆ ಸಲ್ಲಿಸಿದೆ.

ರಷ್ಯಾ ಅಭಿವೃದ್ಧಿಪಡಿಸಿರುವ ‘ಸ್ಪುಟ್ನಿಕ್ ವಿ‘ ಲಸಿಕೆಯನ್ನು ಪ್ರಸ್ತುತ ಭಾರತದಲ್ಲಿ ಹೈದರಾಬಾದ್‌ನ ಡಾ. ರೆಡ್ಡೀಸ್‌ ಲ್ಯಾಬೊರೇಟರೀಸ್‌ ತಯಾರಿಸುತ್ತಿವೆ.

ADVERTISEMENT

‘ಜೂನ್‌ ತಿಂಗಳಲ್ಲಿ ಕೋವಿಶೀಲ್ಡ್‌ನ 10 ಕೋಟಿ ಡೋಸ್‌ಗಳನ್ನು ತಯಾರಿಸಿ ಪೂರೈಸುತ್ತೇವೆ‘ ಎಂದು ಎಸ್‌ಐಐ ಸಂಸ್ಥೆ ಸರ್ಕಾರಕ್ಕೆ ಭರವಸೆ ನೀಡಿದೆ. ಇದೇ ವೇಳೆ ಈ ಕಂಪನಿ ನೋವಾವ್ಯಾಕ್ಸ್‌ ಲಸಿಕೆಯನ್ನೂ ತಯಾರಿಸುತ್ತಿದ್ದು, ಇದಕ್ಕಾಗಿ ಅಮೆರಿಕದ ಔಷದ ನಿಯಂತ್ರಣ ಸಂಸ್ಥೆಯಿಂದ ಅನುಮತಿಯ ನಿರೀಕ್ಷೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.