ADVERTISEMENT

ಕೋವಿಶೀಲ್ಡ್‌: 1 ಡೋಸ್‌ಗೆ ರಾಜ್ಯ ಸರ್ಕಾರಕ್ಕೆ ₹400, ಖಾಸಗಿ ಆಸ್ಪತ್ರೆಗಳಿಗೆ ₹600

ಕೋವಿಶೀಲ್ಡ್‌ ಲಸಿಕೆಗೆ ದರ ನಿಗದಿಪಡಿಸಿದ ಸೀರಂ ಇನ್‌ಸ್ಟಿಟ್ಯೂಟ್‌

ಪಿಟಿಐ
Published 21 ಏಪ್ರಿಲ್ 2021, 9:30 IST
Last Updated 21 ಏಪ್ರಿಲ್ 2021, 9:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ವಿಶ್ವದ ದೊಡ್ಡ ಲಸಿಕೆ ತಯಾರಿಕಾ ಕಂಪನಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಬುಧವಾರ ಕೋವಿಶೀಲ್ಡ್‌ ಲಸಿಕೆಗೆ ದರ ಪ್ರಕಟಿಸಿದ್ದು, ಪ್ರತಿ ಡೋಸ್‌ ಲಸಿಕೆಗೆ ರಾಜ್ಯ ಸರ್ಕಾರಗಳಿಗೆ ₹400 ಹಾಗೂ ಖಾಸಗಿ ಆಸ್ಪತ್ರೆಗಳಿಗೆ ₹ 600 ದರ ನಿಗದಿ ಮಾಡಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಸೀರಂ ಕಂಪನಿ, ಮುಂದಿನ ಎರಡು ತಿಂಗಳುಗಳಲ್ಲಿ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ, ಈಗಿರುವ ಲಸಿಕೆ ಪೂರೈಕೆ ಸಾಮರ್ಥ್ಯವನ್ನು ಹೆಚ್ಚಿಸುವುದಾಗಿ ತಿಳಿಸಿದೆ.

‘ನಮ್ಮ ಕಂಪನಿ ಉತ್ಪಾದಿಸುವ ಲಸಿಕೆಯ ಶೇ 50 ರಷ್ಟನ್ನು ಕೇಂದ್ರದ ಲಸಿಕೆ ಕಾರ್ಯಕ್ರಮಕ್ಕೆ ನೀಡಲಾಗುವುದು. ಉಳಿದ ಶೇ 50 ರಷ್ಟನ್ನು ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡಲಾಗುವುದು‘ ಎಂದು ಕಂಪನಿ ಟ್ವೀಟ್‌ನಲ್ಲಿ ತಿಳಿಸಿದೆ.

ADVERTISEMENT

ಕೋವಿಶೀಲ್ಡ್‌ ಪ್ರತಿ ಡೋಸ್‌ಗೆ ರಾಜ್ಯ ಸರ್ಕಾರಗಳಿಗೆ ₹400 ಮತ್ತು ಖಾಸಗಿ ಆಸ್ಪತ್ರೆಗಳಿಗೆ ₹600 ಬೆಲೆಗೆ ಲಭ್ಯವಿರುವುದಾಗಿ ಕಂಪನಿ ಟ್ವೀಟ್‌ನಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.