ಬಂಧನ ( ಸಾಂಕೇತಿಕ ಚಿತ್ರ)
ಮುಂಬೈ: ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದ ಮೇಲೆ ನಾಲ್ವರು ಮಹಿಳೆಯರು ಸೇರಿದಂತೆ ಏಳು ಬಾಂಗ್ಲಾದೇಶಿ ಪ್ರಜೆಗಳನ್ನು ಇಂದು (ಶುಕ್ರವಾರ) ಮುಂಬೈನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಹಂಗ್ ಆಶಿರ್ ಮುಲ್ಲಾ (26), ಜಹಿದುಲ್ ಇಸ್ಲಾಂ ಇಮುಲ್ (26), ನೋಯಮ್ ಅಫ್ಜಲ್ ಹುಸೇನ್ ಶೇಖ್ (25), ಅಲಮಿನ್ ಶೇಖ್ (23), ಸುಮಾ ಜಹಿಗಿರ್ ಅಲಮ್ ತುತುಲ್ (24), ತವ್ಮಿನಾ ಅಖ್ತರ್ ರಾಜು (35) ಮತ್ತು ಸಲ್ಮಾ ಮೋಕ್ಸಾದ್ ಅಲಿ (35) ಸುಮಾರು ಐದು ವರ್ಷಗಳಿಂದ ಚೆಂಬೂರಿನ ಮಹುಲ್‌ನಲ್ಲಿ ವಾಸಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.
ತಾವು ಬಾಂಗ್ಲಾದೇಶದ ಪ್ರಜೆಗಳಾಗಿದ್ದು, 2020ರ ಮಾರ್ಚ್‌ನಿಂದ ಮಾನ್ಯ ದಾಖಲೆಗಳಿಲ್ಲದೆ ಮುಂಬೈನಲ್ಲಿ ವಾಸಿಸುತ್ತಿರುವುದಾಗಿ ಏಳು ಮಂದಿ ಒಪ್ಪಿಕೊಂಡಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಆರ್‌ಸಿಎಫ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.