ADVERTISEMENT

ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ: 7 ಸಾವು

ಪಿಟಿಐ
Published 16 ಫೆಬ್ರುವರಿ 2026, 16:41 IST
Last Updated 16 ಫೆಬ್ರುವರಿ 2026, 16:41 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಜೈಪುರ: ಗಾರ್ಮೆಂಟ್‌ ಕಾರ್ಖಾನೆ ಹೆಸರಿನಲ್ಲಿ ಕಾನೂನುಬಾಹಿರವಾಗಿ ಪಟಾಕಿ ತಯಾರು ಮಾಡುತ್ತಿದ್ದ ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿಕೊಂಡು ಸುಮಾರು 7 ಮಂದಿ ಮೃತಪಟ್ಟಿರುವುದು ರಾಜಸ್ಥಾನದ ಖೈರತಲ್‌ ತಿಜಾರ ಜಿಲ್ಲೆಯ ಭಿವಾಡಿಯಲ್ಲಿ ಸೋಮವಾರ ನಡೆದಿದೆ.

ನಗರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಬೆಂಕಿ ಹೊತ್ತಿಕೊಂಡಿರುವುದು ಪೊಲೀಸರಿಗೆ ಗೊತ್ತಾಗಿದೆ. ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಒಂದೂವರೆಗೆ ಗಂಟೆಯ ಶ್ರಮದ ಬಳಿಕ ಬೆಂಕಿ ನಂದಿಸಲಾಗಿದೆ. ಘಟನೆ ಬಗ್ಗೆ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟರ್‌ ಸುಮಿತ್ರಾ ಪಾರೀಕ್ ಮಾಹಿತಿ ನೀಡಿದರು.

ADVERTISEMENT

‘ಕಾರ್ಖಾನೆ ಒಳಗೆ ಸುಮಾರು 20 ಮಂದಿ ಸಿಲುಕಿಕೊಂಡಿದ್ದರು. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಹಲವರು ಹೊರಗೆ ಓಡಿದರು. ಆದರೆ, 9 ಮಂದಿ ಒಳಗೆ ಸಿಲುಕಿಕೊಂಡರು. ಈ ಪೈಕಿ 7 ಮಂದಿ ಸಜೀವ ದಹನವಾಗಿದ್ದಾರೆ. ಇಬ್ಬರು ಇನ್ನೂ ಒಳಗೆ ಸಿಲುಕಿಕೊಂಡಿದ್ದಾರೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.