ಲಖನೌ: ಉತ್ತರಪ್ರದೇಶದ ಬರೇಲಿ ನಗರ ರೈಲು ನಿಲ್ದಾಣದಲ್ಲಿ ಏಳನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಗುರುವಾರ ರಾತ್ರಿ ನಡೆದಿದೆ.
ಎಟಾ ಜಿಲ್ಲೆಯ ನಿವಾಸಿಯಾದ ಸಂತ್ರಸ್ತೆ ತಮ್ಮ ತಂದೆ–ತಾಯಿ ಜೊತೆಗೆ ಉತ್ತರಾಖಂಡ ರಾಜ್ಯದಲ್ಲಿರುವ ಪೂರ್ಣಗಿರಿ ದೇವಸ್ಥಾನಕ್ಕೆ ಭೇಟಿ ನೀಡಿ ಮನೆಗೆ ಹಿಂತಿರುಗುವ ವೇಳೆ ಈ ಘಟನೆ ನಡೆದಿದೆ.
ಬಾಲಕಿಯ ತಂದೆ ವಸ್ತುವೊಂದನ್ನು ಖರೀದಿಸಲು ನಿಲ್ದಾಣದಲ್ಲಿ ಇಳಿದಿದ್ದು, ಮರಳಿ ರೈಲು ಹತ್ತುವ ವೇಳೆ ರೈಲು ಹೊರಟಿದೆ. ಈ ವೇಳೆ ರೈಲು ಹತ್ತಲೂ ಪ್ರಯತ್ನಿಸಿದರೂ, ಫ್ಲ್ಯಾಟ್‌ಫಾರ್ಮ್‌ನಲ್ಲಿ ಬಿದ್ದಿದ್ದಾರೆ. ತಂದೆ ಮರಳಿ ಬಾರದನ್ನು ಗಮನಿಸಿದ ಆಕೆ, ಕೋಚ್‌ನಿಂದ ಜಿಗಿದಿದ್ದಾಳೆ.
ಅಲ್ಪಪ್ರಮಾಣದ ಗಾಯಕ್ಕೆ ತುತ್ತಾಗಿದ್ದ ಆಕೆ ಮರಳಿ ನಿಲ್ದಾಣದತ್ತ ಮರಳುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಆಕೆಯನ್ನು ತಕ್ಷಣವೇ ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು, ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ.
‘ಪ್ರಾಥಮಿಕ ತನಿಖೆಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವುದು ಕಂಡುಬಂದಿದೆ’ ಎಂದು ಬರೇಲಿಯ ಪೊಲೀಸರು ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಆರೋಪಿಯನ್ನು ಬಂಧಿಸಲು ಕ್ರಮ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.