ಶಾರುಕ್ ಖಾನ್ ಮತ್ತು ಶಶಿ ತರೂರ್
ನವದೆಹಲಿ: ಜವಾನ್ ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಸರಳ ಪದಗಳಿಂದ ಅಭಿನಂದನೆ ಸಲ್ಲಿಸಿದ ಸಂಸದ ಶಶಿ ತರೂರ್ ಅವರಿಗೆ ಅವರದ್ದೇ ಪರಿಭಾಷೆಯ ಕಷ್ಟದ ಪದ ಬಳಸಿ ನಟ ಶಾರುಕ್ ಖಾನ್ ಧನ್ಯವಾದ ಹೇಳುವ ಮೂಲಕ ಕಾಲೆಳೆದಿದ್ದಾರೆ.
2023ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಶುಕ್ರವಾರ ಘೋಷಣೆಯಾದವು. ಬಾಲಿವುಡ್ ನಟ ಶಾರುಕ್ ಖಾನ್ ಮತ್ತು ವಿಕ್ರಾಂತ್ ಮೇಸಿ ಅವರು ‘ಆತ್ಯುತ್ತಮ ನಟ’ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕ್ಲಿಷ್ಟಕರ ಹಾಗೂ ವಿಶಿಷ್ಟ ಇಂಗ್ಲಿಷ್ ಪದಗಳನ್ನು ಬಳಸುವಲ್ಲಿ ಹೆಸರುವಾಸಿಯಾಗಿರುವ ಶಶಿ ತರೂರ್ ಅವರು ಶಾರುಕ್‌ಗೆ ಅಭಿನಂದನೆ ಸಲ್ಲಿಸಿದ್ದರು.
‘ರಾಷ್ಟ್ರ ಪ್ರಶಸ್ತಿ ಪಡೆದ ರಾಷ್ಟ್ರದ ಸಂಪತ್ತು’ ಎಂದು ಶಾರುಕ್ ಖಾನ್ ಅವರಿಗೆ ಟ್ಯಾಗ್ ಮಾಡಿ ತರೂರ್ ಅಭಿನಂದಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಶಾರುಕ್, ‘ನಿಮ್ಮ ಸರಳ ಹೊಗಳಿಕೆಗೆ ಧನ್ಯವಾದಗಳು ತರೂರ್... ಹೆಚ್ಚು ಅದ್ಭುತವಾದ (ಮ್ಯಾಗ್ನಿಲೊಕ್ವೆಂಟ್) ಹಾಗೂ ಆ ದೊಡ್ಡ ಪದಪುಂಜಗಳನ್ನು (ಸೆಸ್‌ಕ್ವಿಪೆಡಲಿಯನ್) ನೀವು ಬಳಸಿದ್ದರೆ ಅರ್ಥ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ... ಹ... ಹ...’ ಎಂದು ನಗೆಯಾಡಿದ್ದಾರೆ.
ಈ ಇಬ್ಬರ ಟ್ವೀಟ್‌ಗಳಿಗೆ ಹಲವು ಪ್ರತಿಕ್ರಿಯಿಸಿ ಸಂಭ್ರಮಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.