ADVERTISEMENT

ಬಿಜೆಪಿ ಸಂಸದನನ್ನು ತಲೆಮರೆಸಿಕೊಂಡಿರುವ ವ್ಯಕ್ತಿ ಎಂದು ಘೋಷಿಸಿದ ವಿಶೇಷ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 15:55 IST
Last Updated 23 ನವೆಂಬರ್ 2022, 15:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಹಜಹಾನ್‌ಪುರ, ಉತ್ತರ ಪ್ರದೇಶ:ಇಲ್ಲಿಯ ಬಿಜೆಪಿ ಸಂಸದ ಅರುಣ್‌ ಕುಮಾರ್‌ ಸಾಗರ್‌ ಅವರನ್ನು ಸಂಸದರ/ಶಾಸಕರವಿಶೇಷ ನ್ಯಾಯಾಲಯವೊಂದು ಸೋಮವಾರ ‘ತಲೆಮರೆಸಿಕೊಂಡಿರುವ ವ್ಯಕ್ತಿ’ ಎಂದು ಘೋಷಿಸಿದೆ.

2019ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಆಗಿದ್ದ ಅರುಣ್‌ ಕುಮಾರ್‌ ಅವರಿಂದ ಚುನಾವಣಾ ಪ್ರಚಾರ ಸಾಮಾಗ್ರಿಗಳನ್ನು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ ಅವರು ವಶಪಡಿಸಿಕೊಂಡಿದ್ದರು.ಬಳಿಕ ಈ ಕುರಿತು ಮೊಕದ್ದಮೆ ದಾಖಲಾಗಿತ್ತು. ಅನುಮತಿ ಪಡೆಯದೇ ಗೋಡೆಗಳ ಮೇಲೆ ಚುನಾವಣಾ ಘೋಷಣೆಗಳನ್ನು ಬರೆದಿದ್ದ ಆರೋಪದ ಮೇಲೂ ಮೊಕದ್ದಮೆ ದಾಖಲಿಸಲಾಗಿತ್ತು. ಈ ಮೊಕದ್ದಮೆಗಳ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗುವಂತೆ ಹಲವು ಬಾರಿಅವರಿಗೆ ಸಮನ್ಸ್‌ ನೀಡಲಾಗಿದ್ದರ ಹೊರತಾಗಿಯೂ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಬಳಿಕ ಅವರಿಗೆ ಜಾಮೀನುರಹಿತ ವಾರಂಟ್‌ ನೀಡಲಾಗಿತ್ತು ಎಂದು ಸರ್ಕಾರಿ ವಕೀಲೆ ನೀಲಿಮಾ ಸಕ್ಸೇನಾ ಅವರು ತಿಳಿಸಿದ್ದಾರೆ.

ಅರುಣ್‌ ಕುಮಾರ್‌ ಅವರನ್ನು ‘ತಲೆಮರೆಸಿಕೊಂಡಿರುವ ವ್ಯಕ್ತಿ’ ಎಂದು ಘೋಷಿಸಿರುವ ನ್ಯಾಯಾಧೀಶೆ ಆಸ್ಮಾ ಸುಲ್ತಾನಾ ಅವರು, ಆದೇಶದ ಪ್ರತಿಗಳನ್ನು ಅರುಣ್‌ ಮನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲು ಆದೇಶಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.