ADVERTISEMENT

ಪಾರ್ಥ ಅಪ್ರಬುದ್ಧ: ಶರದ್‌ ಪವಾರ್‌

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 15:35 IST
Last Updated 12 ಆಗಸ್ಟ್ 2020, 15:35 IST
ಶರದ್‌ ಪವಾರ್‌
ಶರದ್‌ ಪವಾರ್‌   

ಮುಂಬೈ:ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ತಮ್ಮ ಸೋದರ ಸಂಬಂಧಿ ಪಾರ್ಥ ಪವಾರ್‌ ಅವರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಯೋಧ್ಯೆ ರಾಮಮಂದಿರದ ಭೂಮಿ ಪೂಜೆಗೆ ಶ್ಲಾಘನೆ ವ್ಯಕ್ತಪಡಿಸುವ ಜೊತೆಗೆನಟ ಸುಶಾಂತ್‌ ಸಿಂಗ್‌ ಅಸಹಜ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಪಾರ್ಥ ಪವಾರ್‌ ಒತ್ತಾಯಿಸಿದ್ದರು. ಈ ಎರಡು ಬೆಳವಣಿಗೆಗಳು ಎನ್‌ಸಿಪಿಯನ್ನು ಮುಜುಗರಕ್ಕೀಡು ಮಾಡಿದೆ.

ಈ ಸಂಬಂಧ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶರದ್‌ ಪವಾರ್‌, ‘ಅವನು ಅಪ್ರಬುದ್ಧ. ಅವನ ಹೇಳಿಕೆಗೆ ನಾವು ಮಹತ್ವ ನೀಡುವುದಿಲ್ಲ’ ಎಂದಿದ್ಧಾರೆ.

ADVERTISEMENT

‘ನನಗೆ ಮಹಾರಾಷ್ಟ್ರ ಮತ್ತು ಮುಂಬೈ ಪೊಲೀಸರ ಮೇಲೆ ಶೇಕಡ ನೂರರಷ್ಟು ನಂಬಿಕೆ ಇದೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಆದರೆ, ಈ ಪ್ರಕರಣವನ್ನು ಸಿಬಿಐಗೆ ವಹಿಸಲೇಬೇಕು ಎಂದು ಯಾರಾದರೂ ಬಯಸಿದರೆ, ಅದನ್ನು ವಿರೋಧಿಸಲು ಯಾವುದೇ ಕಾರಣವಿಲ್ಲ’ ಎಂದು ತಿಳಿಸಿದ್ದಾರೆ.

ದೇಶದ ಜನರ ಭಾವನೆಗಳನ್ನು ಗಣನೆಗೆ ತೆಗೆದುಕೊಂಡು ನಟ ಸುಶಾಂತ್‌ ಸಿಂಗ್‌ ಪ್ರಕರಣದ ತನಿಖೆಯನ್ನುಸಿಬಿಐಗೆ ವಹಿಸಬೇಕು ಎಂದು ಪಾರ್ಥ ಅವರು ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಅವರನ್ನು ಭೇಟಿಯಾಗಿ ಒತ್ತಾಯಿದ್ದರು.

ಉಪಮುಖ್ಯಮಂತ್ರಿ ಅಜಿತ್ ಪವಾರ್ ಪುತ್ರ ಪಾರ್ಥ ಪವಾರ್‌ ಅವರನ್ನು2019ರ ಲೋಕಸಭಾ ಚುನಾವಣೆಯಲ್ಲಿಕಣಕ್ಕಿಳಿಸಲಾಗಿತ್ತು. ಆದರೆ ಅವರು ಸೋತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.