ADVERTISEMENT

ಶಿಮ್ಲಾದಲ್ಲಿ ವರ್ಷದ ಮೊದಲ ಹಿಮಪಾತ

ಪಿಟಿಐ
Published 4 ಫೆಬ್ರುವರಿ 2021, 5:42 IST
Last Updated 4 ಫೆಬ್ರುವರಿ 2021, 5:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿಮ್ಲಾ: ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ಗುರುವಾರ ವರ್ಷದ ಮೊದಲ ಹಿಮಪಾತವಾಗಿದೆ.

ಶಿಮ್ಲಾ, ಕುರ್ಫಿ, ಕೀಲಾಂಗ್‌, ಕಲ್ಪಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗುರುವಾರ ಬೆಳಿಗ್ಗೆ 2021ನೇ ವರ್ಷದ ಮೊದಲ ಹಿಮಪಾತವಾಗಿದೆ.

‘ಮಧ್ಯಮ ಮತ್ತು ಎತ್ತರದ ಬೆಟ್ಟಗಳಲ್ಲಿ ಹಿಮಪಾತ ಮುಂದುವರಿಯುವ ಸಾಧ್ಯತೆಯಿದೆ’ ಎಂದು ಶಿಮ್ಲಾದ ಹವಾಮಾನ ಇಲಾಖೆ ಅಂದಾಜಿಸಿದೆ. ಹಿಮಾಚಲ ಪ್ರದೇಶದಲ್ಲಿ ಗುರುವಾರ ಗುಡುಗು ಸಹಿತ ಮಳೆಯಾಗಬಹುದು ಎಂದು ಹೇಳಿರುವ ಇಲಾಖೆಯು ರಾಜ್ಯದಲ್ಲಿ ‘ಯೆಲ್ಲೋ’ ಅಲರ್ಟ್‌ ಘೋಷಿಸಿದೆ.

ADVERTISEMENT

‘ಬಯಲು ಪ್ರದೇಶ, ಸಣ್ಣ ಬೆಟ್ಟಗಳಲ್ಲಿ ಗುಡುಗಿನ ಆರ್ಭಟ ಇರುವ ಸಂಭವ ಇದೆ ಹಾಗೂ ಮಧ್ಯಮ ಮತ್ತು ಎತ್ತರದ ಬೆಟ್ಟಗಳಲ್ಲಿ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ’ ಎಂದು ಶಿಮ್ಲಾದ ಹವಾಮಾನ ಕೇಂದ್ರವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.