ADVERTISEMENT

ಬಿಜೆಪಿಗೆ ಮೇಯರ್ ಸ್ಥಾನ ನೀಡಲು ಶಿಂದೆ ಬಣ ಬಯಸುತ್ತಿಲ್ಲ: ಸಂಜಯ್ ರಾವುತ್‌

ಪಿಟಿಐ
Published 18 ಜನವರಿ 2026, 16:13 IST
Last Updated 18 ಜನವರಿ 2026, 16:13 IST
ಸಂಜಯ್‌ ರಾವುತ್
ಸಂಜಯ್‌ ರಾವುತ್   

ಮುಂಬೈ: ‘ಬೃಹನ್‌ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯಲ್ಲಿ ಬಿಜೆಪಿಯ ಮೇಯರ್ ಇರುವುದನ್ನು ಏಕನಾಥ ಶಿಂದೆ ಹಾಗೂ ಆವರ ಪಕ್ಷದ ಚುನಾಯಿತ ಸದಸ್ಯರು ಬಯಸುತ್ತಿಲ್ಲ’ ಎಂದು ಶಿವಸೇನಾ(ಯುಬಿಟಿ) ರಾಜ್ಯಸಭಾ ಸಂಸದ ಸಂಜಯ್ ರಾವುತ್‌ ಭಾನುವಾರ ಹೇಳಿದ್ದಾರೆ.

ಬಿಎಂಸಿಗೆ ಚುನಾವಣೆಯ ಫಲಿತಾಂಶ ಬಳಿಕ, ಶಿಂದೆ ನೇತೃತ್ವದ ಶಿವಸೇನಾ ತನ್ನ ನೂತನ ಚುನಾಯಿತ ಸದಸ್ಯರನ್ನು ಹೋಟೆಲ್‌ವೊಂದಕ್ಕೆ ಸ್ಥಳಾಂತರಿದೆ. ಈ ಬೆಳವಣಿಗೆ ಬೆನ್ನಲ್ಲೇ ರಾವುತ್‌ ಈ ಹೇಳಿಕೆ ನೀಡಿದ್ದಾರೆ.

‘ತೆರೆಮರೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಕಾರ್ಪೋರೇಟರ್‌ಗಳನ್ನು ಹೋಟೆಲ್‌ನಲ್ಲಿ ಕೂಡಿಹಾಕಿದ್ದರೂ, ಸಂದೇಶ ರವಾನಿಸಲು ಹಾಗೂ ಸ್ವೀಕರಿಸಲು ಬೇರೆ ಮೂಲಗಳು ಇವೆ’ ಎಂದು ಹೇಳಿದ್ದಾರೆ. ಹೀಗಾಗಿ, ರಾವುತ್‌ ಹೇಳಿಕೆ ಈಗ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ADVERTISEMENT

ಪರಭಣಿ: ಒಂದು ಮತದಿಂದ ಗೆಲುವು

ಛತ್ರಪತಿ ಸಂಭಾಜಿನಗರ: ಪರಭಣಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಶಿವಸೇನಾ(ಯುಬಿಟಿ) ಅಭ್ಯರ್ಥಿ ವೆಂಕಟ ದಹಾಳೆ ಅವರು ಕೇವಲ ಒಂದು ಮತ ಅಂತರದಿಂದ ಗೆದ್ದಿದ್ದಾರೆ. ದಹಾಳೆ 4312 ಮತ ಪಡೆದಿದ್ದು ಪ್ರತಿಸ್ಪರ್ಧಿ ಬಿಜೆಪಿಯ ಪ್ರಸಾದ್‌ ನಗರೆ 4311 ಮತಗಳನ್ನು ಪಡೆದಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.