ADVERTISEMENT

ಮಹಾರಾಷ್ಟ್ರ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಿ: ಶಿವಸೇನಾ ಒತ್ತಾಯ

ಪ್ರಧಾನಿ, ಗೃಹಸಚಿವರಿಗೆ ಶಿವಸೇನಾ ಒತ್ತಾಯ

ಪಿಟಿಐ
Published 15 ಅಕ್ಟೋಬರ್ 2020, 9:57 IST
Last Updated 15 ಅಕ್ಟೋಬರ್ 2020, 9:57 IST
ಶಿವಸೇನಾ
ಶಿವಸೇನಾ   

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಶಿವಸೇನಾ ಒತ್ತಾಯಿಸಿದೆ. ಈ ಮೂಲಕ ರಾಜಭವನದ ಘನತೆಯನ್ನು ರಕ್ಷಿಸಬೇಕು ಎಂದು ಅದು ಆಗ್ರಹಿಸಿದೆ.

ದೇವಾಲಯಗಳನ್ನು ತೆರೆಯುವ ಸಂಬಂಧ ರಾಜ್ಯಪಾಲ ಕೋಶ್ಯಾರಿ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಪತ್ರ ಬರೆದಿದ್ದು, ಅದರಲ್ಲಿ ‘ಶಿವಸೇನಾ ಮುಖಂಡರು ಇದ್ದಕ್ಕಿದ್ದಂತೆ ಜಾತ್ಯತೀರಾಗಿ ಬದಲಾಗಿದ್ದಾರಾ‘ ಎಂದು ಪ್ರಶ್ನಿಸಿದ್ದರು. ಇದನ್ನು ಉಲ್ಲೇಖಿಸಿ ತನ್ನ ಪಕ್ಷದ ಮುಖವಾಣಿ ‘ಸಾಮ್ನಾ‘ದ ಸಂಪಾದಕೀಯದಲ್ಲಿ ಶಿವಸೇನೆ ರಾಜ್ಯಪಾಲರ ವಿರುದ್ಧ ಹರಿಹಾಯ್ದಿದೆ.

‘ಈ ವಿಷಯದಲ್ಲಿ ಸರ್ಕಾರದ ವಿರುದ್ಧ ದಾಳಿ ನಡೆಸಲುಬಿಜೆಪಿಯವರು ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿದೆ‘ಎಂದು ಸಂಪಾದಕೀಯದಲ್ಲಿ ಟೀಕಿಸಿದೆ.

ADVERTISEMENT

ಕೋವಿಡ್‌ 19 ಸುರಕ್ಷತಾ ಕ್ರಮಗಳೊಂದಿಗೆ ರೆಸ್ಟೊರೆಂಟ್‌ಗಳನ್ನು ತೆರೆಯಲಾಗಿದೆ. ಆದರೆ, ದೇವಾಲಯಗಳನ್ನೂ ತೆರೆದರೆ, ಜನಸಂದಣಿ ಹೆಚ್ಚಾಗುತ್ತದೆ. ದೇವಾಲಯಗಳನ್ನು ತೆರೆಯಲೇಬೇಕೆಂದು ಬಿಜೆಪಿ ಬಯಸುವುದಾದರೆ, ಅದನ್ನು ರಾಷ್ಟ್ರೀಯ ನೀತಿಯನ್ನಾಗಿ ಮಾಡಿ. ಏಕೆಂದರೆ, ದೇಶದಲ್ಲಿ ಹಲವಾರು ಪ್ರಮುಖ ದೇವಾಲಯಗಳನ್ನು ಮುಚ್ಚಲಾಗಿದೆ‘ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.