ADVERTISEMENT

ಪತನದ ಮೊದಲ ಹಂತದಲ್ಲಿ ಶಿವಸೇನಾ:  ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 7:03 IST
Last Updated 12 ನವೆಂಬರ್ 2019, 7:03 IST
   

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ, ಮಹಾರಾಷ್ಟ್ರದಲ್ಲಿ ಶಿವಸೇನಾ 2014ರ ಮತ್ತು 2019ರ ಚುನಾವಣೆಯಲ್ಲಿ ಅಸ್ತಿತ್ವ ಉಳಿಸಿಕೊಂಡಿದೆ. ಇದೀಗ ಬಿಜೆಪಿ ಸಖ್ಯ ತೊರೆದಿರುವ ಶಿವಸೇನಾ ಪತನದ ಮೊದಲ ಹಂತದಲ್ಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಧ್ಯವಿಲ್ಲದ ಷರತ್ತುಗಳನ್ನು ಶಿವಸೇನಾ ಮುಂದಿಟ್ಟಿದೆ. ಹೆಚ್ಚು ಸೀಟುಗಳನ್ನು ಪಡೆದ ಪಕ್ಷದವರೇಮುಖ್ಯಮಂತ್ರಿಯಾಗಬೇಕು ಎಂಬ ಮಾತಿಗೆ ವಿರುದ್ಧವಾಗಿ ಶಿವಸೇನಾನಡೆದುಕೊಂಡಿದೆ ಎಂದರು.

ಮುಂಬರುವ ಕರ್ನಾಟಕ ಉಪಚುನಾವಣಿಯಲ್ಲಿಬಿಜೆಪಿಯ ಕೆಲ ಮುಖಂಡರು ಕಾಂಗ್ರೆಸ್ ಟಿಕೆಟ್‌ಗಾಗಿ ಆ ಪಕ್ಷದ ನಾಯಕರನ್ನು ಭೇಟಿಯಾಗುತ್ತಿದ್ದಾರೆಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಂದೇನಾಗುತ್ತದೆ ಎಂಬ ಅರಿವಿಲ್ಲದೆ ಯಾರಾದರೂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡುವಂತಹ ದುಡುಕಿನ ಕ್ರಮ ಕೈಗೊಳ್ಳಬಾರದು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.